ಬಂಜಾರ ಉಡುಗೆ ತೊಟ್ಟು ನೃತ್ಯ ಮಾಡಿದ ಸಚಿವರ ಪತ್ನಿ

ದಾವಣಗೆರೆ : ಕೃಷ್ಣ ಜನ್ಮಾಷ್ಟಮಿ ಹಿನ್ನಲೆ ಬಂಜಾರ ಉಡುಗೆ ತೊಟ್ಟು ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರ ಪತ್ನಿ ನೃತ್ಯ ಮಾಡಿದ್ದಾರೆ ಓಬ್ಬಜ್ಜಿಹಳ್ಳಿಯಲ್ಲಿ ಸಂಭ್ರಮ ನಡೆದಿದೆ.

ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಕೃಷ್ಣ ದೇವರ ಮೂರ್ತಿಯನ್ನು ಹಿಡಿದು ಗ್ರಾಮದಲ್ಲಿ ಮೆರವಣಿಗೆ ನಡೆದಿತ್ತು. ಈ ವೇಳೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ, ಎಂಬುವವರು ಕೃಷ್ಣನ ಮೆರವಣಿಗೆಯಲ್ಲಿ ಬಂಜಾರ ಸಮುದಾಯದ ಉಡುಗೆ ತೊಟ್ಟು ಡ್ಯಾನ್ಸ್ ಮಾಡಿದ್ದಾರೆ.

ಇದನ್ನು ಓದಿ : ಹರಿಪ್ರಸಾದ್ ಹೇಳಿದ ಆ ‘ಮಜಾವಾದಿ’ ಯಾರು? : ಯತ್ನಾಳ್

ಅಷ್ಟೇ ಅಲ್ಲದೆ  ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಅಲ್ಲಿ ನೇರದಿದ್ದ ಮಹಿಳೆಯರು ನೃತ್ಯ ಹೇಳಿಕೊಟ್ಟಿದ್ದು, ಮಹಿಳೆಯರ ಜೊತೆ ಖುಷಿಯಲ್ಲಿ ಪಾಲ್ಗೊಂಡು ನೃತ್ಯ ಮಾಡಿರುವ ಪ್ರಭಾ ಮಲ್ಲಿಕಾರ್ಜುನ್ ರವರು. ಬಳಿಕ ನೃತ್ಯ ಮಾಡುತ್ತ ಎಲ್ಲರ ಜೊತೆಯಲ್ಲಿ ಕೃಷ್ಣನ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

RELATED ARTICLES

Related Articles

TRENDING ARTICLES