Site icon PowerTV

ಇಬ್ಬರು ಅಸಹಾಯಕರು ಮೈತ್ರಿ ಮಾಡಿಕೊಳ್ತಿದ್ದಾರೆ: ಮಾಜಿ ಸಿಎಂ ಶೆಟ್ಟರ್ ವ್ಯಂಗ್ಯ​!

ಹುಬ್ಬಳ್ಳಿ:  ಜೆಡಿಎಸ್ – ಬಿಜೆಪಿ ಇಬ್ಬರು ಅಸಹಾಯಕರು ಸೇರಿ ಮೈತ್ರಿ ಮಾಡಕೊಳ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಜೆಡಿಎಸ್ ಮತ್ತು ಬಿಜೆಪಿಗೆ ಬಿಟ್ಟ ವಿಚಾರ. ಹಿಂದೆಯೂ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ನಂತರ ಅದಕ್ಕೆ ಬ್ರೇಕ್ ಆಯ್ತು. ವಿಧಾನಸಭೆ ಚುನಾವಣೆಯಲ್ಲಿ ಇಬ್ಬರು ಪರಸ್ಪರ ಫೈಟ್ ಮಾಡಿದ್ದರು. ಈಗ ಮತ್ತೆ ಮೈತ್ರಿ ವಿಚಾರ ಮಾತಾಡುತ್ತಿದ್ದಾರೆ.

ಇದನ್ನೂ ಓದಿ: ಶಾಲಾ ಸಮವಸ್ತ್ರ ಪೂರೈಕೆಯಲ್ಲಿ ಅಕ್ರಮ: ಆರೋಪಿಗಳ ವಿರುದ್ದ ಕ್ರಮಕ್ಕೆ ಸೂಚನೆ: ಹೆಚ್​.ಕೆ ಪಾಟೀಲ್​

ಅನುಕೂಲವಿದ್ದಾಗ ಮೈತ್ರಿ ಮಾಡಿಕೊಳ್ಳುವುದು. ಅನಾನುಕೂಲವಾಗದಾಗ ಮೈತ್ರಿಯಿಂದ ಹಿಂದೆ ಸರಿಯೋದು. ಈ ರೀತಿ ಮಾಡಿದಾಗ ಜನರ ನಂಬಿಕೆಯನ್ನು ಕಳ್ಕೋತಾರೆ, ಜೊತೆಗೆ ಆಯಾ ಪಕ್ಷಗಳ ಕ್ರೆಡಿಬಿಲಿಟಿ ಸಹ ಹೋಗುತ್ತೆ ಎಂದು ಅವರು ಹೇಳಿದರು.

Exit mobile version