Site icon PowerTV

ಯೂಟರ್ನ್​ ವೇಳೆ ಶಾಲಾ ವಾಹನ ಪಲ್ಟಿ: ಮಕ್ಕಳಿಗೆ ಗಾಯ!

ಬೆಂಗಳೂರು : ಯೂಟರ್ನ್ ಮಾಡುವಾಗ ಸ್ಕೂಲ್ ವ್ಯಾನ್ ಪಲ್ಟಿಯಾಗಿರುವ ಘಟನೆ ನಗರದ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಇಂದು ಬೆಳಗ್ಗೆ ನಡೆದಿದ್ದು ಅದೃಷ್ಟವಶಾತ್ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ.

ಕಾಮಾಕ್ಯ ರಸ್ತೆ ಮಾರ್ಗವಾಗಿ ಪದ್ಮನಾಭನಗರದ ಕಾರ್ಮಲ್ ಶಾಲೆಗೆ ತೆರಳ್ತಿದ್ದ ಸ್ಕೂಲ್​ ವ್ಯಾನ್ ಸಿಗ್ನಲ್​ ಬಿದ್ದ ಕಾರಣ ಬಸ್​ ಚಾಲಕ ಯೂಟರ್ನ್ ತೆಗೆದುಕೊಳ್ಳಲು ಮುಂದಾಗಿನೆ. ಈ ವೇಳೆ ವ್ಯಾನ್​ನ ಚಕ್ರ  ಡಿವೈಡರ್ ಮೇಲೆ ಹತ್ತಿ ಪಲ್ಟಿಯಾಗಿದೆ.

ಇದನ್ನೂ ಓದಿ: ಇನ್ಮುಂದೆ ದೇವಾಲಯದ ಸುತ್ತ ಗುಟ್ಕಾ ಸಿಗರೇಟ್​ ನಿಷೇಧ : ಸಚಿವ ರಾಮಲಿಂಗಾರೆಡ್ಡಿ

ಬಸ್​ ನಿಧಾನಕ್ಕೆ ಸಾಗಿತ್ತಿದ್ದ ಕಾರಣ ಬಸ್​ ನಲ್ಲಿದ್ದ 10 ಕ್ಕೂ ಹೆಚ್ಚು ಮಕ್ಕಳ ಪೈಕಿ ವೃಷಲ್​ ಎಂಬ ಬಾಲಕಿಗೆ ತರಚಿದಗಾಯಗಳಾಗಿದೆ ಮತ್ತು ಚಾಲಕ ಕೃಷ್ಣಮೂರ್ತಿಯ ಭುಜಕ್ಕೆ ಸಣ್ಣಪುಟ್ಟಗಾಯಗಳಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕಾಗಮಿಸಿದ್ದ ಬನಶಂಕರಿ ಸಂಚಾರಿ ಪೊಲೀಸರು ಸ್ಥಳೀಯರ ಸಹಾಯದಿಂದ ಮಕ್ಕಳನ್ನು ರಕ್ಷಸಿದ್ದಾರೆ.

ಘಟನೆಯಲ್ಲಿ ಗಾಯಗಳಾಗಿರುವ ಚಾಲಕ ಮತ್ತು ಶಾಲಾ ಬಾಲಕಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರಗೆ ಕರೆದೊಯ್ಯಲಾಗಿದೆ. ಈ ಅವಘಡಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದ್ದು ಈ ಘಟನೆಯೂ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Exit mobile version