Site icon PowerTV

ಮೆಡಿಕಲ್‌ ಕಾಲೇಜು ಸ್ಥಳಾಂತರ ವಿರೋಧಿಸಿ ರಾಮನಗರ ಬಂದ್‌ಗೆ ಕರೆ!

ರಾಮನಗರ : ರಾಜೀವ್ ಗಾಂಧಿ ಮೆಡಿಕಲ್‌ ಕಾಲೇಜು ಸ್ಥಳಾಂತರ ವಿರೋಧಿಸಿ ರಾಮನಗರ ಬಂದ್‌ಗೆ ಕರೆ ನೀಡಲಾಗಿದ್ದು ಬೆಳಗ್ಗೆ 6.30ರಿಂದ ಸಂಜೆ 6 ಗಂಟೆವರೆಗೂ ರಾಮನಗರದಾದ್ಯಂತ ಬಂದ್ ಆಚರಿಸಲಾಗ್ತಿದೆ.

ಕಾಲೇಜು ಉಳಿಸಿ ಹೋರಾಟ ಸಮಿತಿ ವತಿಯಿಂದ ಬಂದ್‌ಗೆ ಕರೆ ನೀಡಲಾಗಿದ್ದು, ಜೆಡಿಎಸ್, ಬಿಜೆಪಿ ಸೇರಿ ಕನ್ನಡಪರ ಸಂಘಟನೆಗಳು ಸಾಥ್ ಕೊಟ್ಟಿವೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಆಕ್ರೋಶ ಹೊರಹಾಕಿದ್ರು.

ಇದನ್ನೂ ಓದಿ: ಇನ್ಮುಂದೆ ದೇವಾಲಯದ ಸುತ್ತ ಗುಟ್ಕಾ ಸಿಗರೇಟ್​ ನಿಷೇಧ : ಸಚಿವ ರಾಮಲಿಂಗಾರೆಡ್ಡಿ

ರಾಮನಗರದಿಂದ ಕನಕಪುರಕ್ಕೆ ಮೆಡಿಕಲ್‌ ಕಾಲೇಜು ಸ್ಥಳಾಂತರ ಮಾಡದಂತೆ ಸರ್ಕಾರಕ್ಕೆ ಆಗ್ರಹಿಸಿ ಹೋರಾಟ ಮಾಡ್ತಿದ್ದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಲಾಯ್ತು. ಇಂದಿನ ಬಂದ್‌ಗೆ ವರ್ತಕರ ಸಂಘ, ಕಾರ್ಮಿಕ ಸಂಘ, ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಖಾಸಗಿ ಶಾಲೆಗಳಿಗೆ ಈಗಾಗಲೇ ರಜೆ ಘೋಷಣೆ ಮಾಡಲಾಗಿದೆ. ಬೈಕ್‌ ರ್ಯಾಲಿ ನಡೆಸಿ ರಾಮನಗರ ಐಜೂರು ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಮತ್ತೊಂದೆಡೆ ಬಂದ್‌ಗೆ ರಾಮನಗರ ಎಸ್‌ಪಿ ಅನುಮತಿ ನೀಡಿಲ್ಲ. ಬಲವಂತವಾಗಿ ಅಂಗಡಿ ಮುಂಗಟ್ಟು ಬಂದ್‌ ಮಾಡಿದರೇ ಕೇಸ್ ಹಾಕಲಾಗುತ್ತೆ. ಕಾನೂನು ಉಲ್ಲಂಘಿಸಿದ್ರೆ ಕಾನೂನು ಕ್ರಮದ ಎಚ್ಚರಿಕೆ ಕೊಟ್ಟಿದ್ದು, ರಾಮನಗರ ಟೌನ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

Exit mobile version