Site icon PowerTV

ಬಿಜೆಪಿ-ಜೆಡಿಎಸ್ ಮೈತ್ರಿಗೆ ‘ಆಲ್ ದಿ ಬೆಸ್ಟ್’ ಎಂದ ಡಿಕೆಶಿ

ಬೆಂಗಳೂರು : ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಕಮಲ-ದಳ’ದ ಮೈತ್ರಿಗೆ ನನ್ನ ವಿರೋಧವಂತೂ ಇಲ್ಲ. ಅವರಿಗೆ ಆಲ್‌ ದಿ ಬೆಸ್ಟ್‌ ಎಂದು ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್‌ ಮೈತ್ರಿಯಾಗಿ ಲೋಕಸಭಾ ಚುನಾವಣೆ ಎದುರಿಸುವುದಾದರೆ ಬಹಳ ಸಂತೋಷ. ಆದರೆ, ಮೈತ್ರಿಯಾದ ನಂತರ ಜೆಡಿಎಸ್‌ ತನ್ನ ಸಿದ್ಧಾಂತ ಹೇಗೆ ಉಳಿಸಿಕೊಳ್ಳುತ್ತದೆ ಗೊತ್ತಿಲ್ಲ. ಜೆಡಿಎಸ್ ಪಕ್ಷ ಉಳಿಯುತ್ತೋ? ಇಲ್ಲವೋ? ಗೊತ್ತಿಲ್ಲ ಎಂದು ಕುಟುಕಿದ್ದಾರೆ.

ಹಿಂದೆ ಕೂಡ ಮೈತ್ರಿ ಮಾಡಿಕೊಂಡಿದ್ರು. ಅವರ ಅನಕೂಲಕ್ಕೆ ಏನೋ ಮಾಡಿಕೊಳ್ಳಲಿ ಬಿಡಿ. ಜೆಡಿಎಸ್ ಉಳಿದುಕೊಳ್ಳುತ್ತೋ ಬಿಡುತ್ತೊ ಗೊತ್ತಿಲ್ಲ. ಅವರ ಸಿದ್ಧಾಂತ ಹೇಗೆ ಅಂತ. ಅವರ ಪಾರ್ಟಿ, ಶಾಸಕರು, ಮಾಜಿ ಶಾಸಕರು ಏನ್ ಆಗ್ತಾರೋ ಗೊತ್ತಿಲ್ಲ. ನನಗೂ ನಿಮ್ಮ ಹಾಗೆ ಕಿವಿಯಲ್ಲಿ ಬಂದು ಹೇಳ್ತಾ ಇದ್ದಾರೆ ಎಂದು ದಳಪತಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

Exit mobile version