Site icon PowerTV

ಮೋದಿ ಹೇಳೋದು ಒಂದು, ಮಾಡೋದು ಮತ್ತೊಂದು : ಈಶ್ವರ್ ಖಂಡ್ರೆ

ಬೀದರ್ : ಪ್ರಧಾನಿ ನರೇಂದ್ರ ಮೋದಿ ಅವರು ಹೇಳೋದು ಒಂದು, ಮಾಡೋದು ಒಂದು. ಯಾವ ರೀತಿ ಸುಳ್ಳುಗಳನ್ನು ಬಿತ್ತರಿಸುತ್ತಿದ್ದಾರೆ ಅನ್ನೋದನ್ನ ಜನರು ಅರಿತುಕೊಂಡಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ಕುಟುಕಿದರು.

ಬೀದರ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿಕೂಟದ ಇಂಡಿಯಾಗೆ ಜನ ಬೆಂಬಲ ನೀಡ್ತಾರೆ. ದೇಶದ ಜಾತ್ಯಾತೀತ ಪಕ್ಷಗಳಿಗೆ ಜನರು ಮಣೆ ಹಾಕ್ತಾರೆ, ಮಣ್ಣನೆ ಕೊಡ್ತಾರೆ. ರಾಜ್ಯದಲ್ಲಿ ಉತ್ತಮ ಆಡಳಿತ ಕೊಡುತ್ತಿದ್ದೇವೆ. ಹಾಗೆ ದೇಶದಲ್ಲಿ ಉತ್ತಮ ಆಡಳಿತ ಕೊಡ್ತೇವೆ. ಈ ಬಾರಿ ಲೋಕಸಭಾ ಚುನಾವಣೆ ಗೆಲ್ಲುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಯಾರು ಒಗ್ಗಟ್ಟಾದ್ರು, ಕೈ ಜೋಡಿಸಿದ್ರು  ಕಾಂಗ್ರೆಸ್‌ಗೆ ಯಾವುದೇ ರೀತಿ ಸಮಸ್ಯೆ ಆಗೊಲ್ಲ. ರಾಜ್ಯದ ಜನರು ನಮ್ಮ ಪರವಾಗಿದ್ದಾರೆ. ಹೀಗಾಗಿ, ಕಾಂಗ್ರೆಸ್ ಪ್ರಚಂಡ ಬಹುಮತದಿಂದ ಗೆಲ್ಲುತ್ತೆ. ತಾ.ಪಂ, ಜಿ.ಪಂ ಹಾಗೂ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ. ಯಾರೇ ಮೈತ್ರಿ ಮಾಡಿಕೊಂಡ್ರೂ ನಾವು ಗೆಲ್ತೇವೆ ಎಂದು ಹೇಳಿದರು.

ಯಡಿಯೂರಪ್ಪ ನಿವೃತ್ತಿ ಆಗೋದು ಒಳ್ಳೆಯದು

ಬಿಜೆಪಿಯವರು ಮಾಜಿ ಸಿಎಂ ಡಾ.ಬಿ.ಎಸ್ ಯಡಿಯೂರಪ್ಪರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಯಡಿಯೂರಪ್ಪನವರು ಗೌರವಯುತವಾಗಿ ನಿವೃತ್ತಿ ಆದರೆ ಒಳ್ಳೆಯದು. ಅಷ್ಟೊಂದು ಅವಮಾನ ಮಾಡಿದರೂ ಯಾಕೆ ಈ ರೀತಿ ಹೇಳಿಕೆ ನೀಡ್ತಿದಾರೊ ಗೊತ್ತಿಲ್ಲ. ಯಡಿಯೂರಪ್ಪ ನಿವೃತ್ತಿ ಆಗೋದು ಒಳ್ಳೆಯದು ಎಂದು ಸಚಿವ ಖಂಡ್ರೆ ಸಲಹೆ ನೀಡಿದರು.

ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ್ದು ಕಾಂಗ್ರೆಸ್

ಕಾಂಗ್ರೆಸ್ ಹಿಂದೂ ವಿರೋಧಿ ಎಂದಿರುವ ಶಾಸಕ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಎಲ್ಲ ಜಾತಿಯವರನ್ನು ಕರೆದುಕೊಂಡು ಮುಂದೆ ಹೋಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ್ದು ಕಾಂಗ್ರೆಸ್ ಮತ್ತು ಮುನ್ನಡೆಸುವುದು ಕಾಂಗ್ರೆಸ್ ಎಂದು ಈಶ್ವರ ಖಂಡ್ರೆ ತಿರುಗೇಟು ನೀಡಿದರು.

Exit mobile version