Site icon PowerTV

ಟ್ರಂಪ್ ಜೊತೆ ಗಾಲ್ಫ್ ಆಡಿದ ಧೋನಿ

ಬೆಂಗಳೂರು : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇಬ್ಬರೂ ಗಾಲ್ಫ್ ಆಟವನ್ನು ಆಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಧೋನಿ ಹಾಗೂ ಟ್ರಂಪ್ ಗಾಲ್ಫ್ ಆಟದ ಉಡುಪಿನಲ್ಲಿರುವ ಪೋಟೋವನ್ನು ಎಕ್ಸ್‌ನಲ್ಲಿ ಹಲವರು ಹಂಚಿಕೊಂಡಿದ್ದಾರೆ. ಕ್ರಿಕೆಟಿಗ ಮುಫದ್ದಲ್ ವೋಹ್ರಾ ಕೂಡ ಧೋನಿ ಹಾಗೂ ಟ್ರಂಪ್ ಗಾಲ್ಫ್ ಆಡುತ್ತಿರುವ ವಿಡಿಯೋ ಹಂಚಿಕೊಂಡು ‘MSD ಒಬ್ಬ ಐಕಾನ್ ಮತ್ತು ಲೆಜೆಂಡ್’ ಎಂದು ಬರೆದುಕೊಂಡಿದ್ದಾರೆ.

ಯುಎಸ್ ಓಪನ್ 2023 ಪುರುಷರ ಸಿಂಗಲ್ಸ್ ಕ್ವಾರ್ಟರ್-ಫೈನಲ್ ಪಂದ್ಯ ವೀಕ್ಷಿಸಲು ಧೋನಿ ಅವರು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದರು. ಡೊನಾಲ್ಡ್​ ಟ್ರಂಪ್ ಅವರು ಧೋನಿ ಅವರನ್ನು ಗಾಲ್ಫ್ ಆಟಕ್ಕೆ ಆಹ್ವಾನಿಸಿದ್ದರು. ಈ ಆಹ್ವಾನ ಸ್ವೀಕರಿಸಿದ ಮಿಸ್ಟರ್ ಕೂಲ್ ಖ್ಯಾತಿಯ ಧೋನಿ ಅಲ್ಲಿಗೆ ಹೋಗಿ ಟ್ರಂಪ್​ರನ್ನು ಭೇಟಿಯಾದರು. ಬಳಿಕ, ಟ್ರಂಪ್ ಜೊತೆ ಸ್ಪಲ್ಪ ಹೊತ್ತು ಗಾಲ್ಫ್ ಆಡಿದರು.

ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿರುವ ಧೋನಿ ಹಾಗೂ ಸದಾ ಅಮೆರಿಕ ರಾಜಕೀಯದಲ್ಲಿ ತೊಡಗಿರುವ ಟ್ರಂಪ್ ಅವರು ಒಟ್ಟಿಗೆ ಕಾಣಿಸಿಕೊಂಡಿರುವುದು ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದೆ.

Exit mobile version