Site icon PowerTV

ಕಾಂಗ್ರೆಸ್ ಬಂದಿರೋದೇ ರಾಜ್ಯಕ್ಕೆ ದುರದೃಷ್ಟಕರ : ಕಟ್ಟಾ ಸುಬ್ರಹ್ಮಣ್ಯ ನಾಯ್ಡು

ಬೆಂಗಳೂರು : ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸಾಕು ಯಾವಗಾಲೂ ಬರಗಾಲ ಸೃಷ್ಟಿಯಾಗುತ್ತಗದೆ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಉಂಟಾಗುತ್ತದೆ. ಆ ಕಾಂಗ್ರೆಸ್​ ಬಂದಿರೋದೆ ರಾಜ್ಯಕ್ಕೆ ದುರದೃಷ್ಟಕರ ಎನ್ನಿಸುತ್ತಿದೆ ಎಂದು ಕುಟುಕಿದರು.

ಇದನ್ನು ಓದಿ : ಖ್ಯಾತ ವ್ಯಂಗ್ಯ ಚಿತ್ರಕಾರ ಅಜಿತ್ ನಿನನ್ ಇನ್ನಿಲ್ಲ

ಸಿದ್ಧರಾಮಯ್ಯ ಅವರು ಬ್ಲ್ಯಾಕ್ ಮೇಲ್ ಚೀಫ್ ಮಿನಿಸ್ಟರ್ ಇದ್ದ ಹಾಗೆ. ನಾವು ಸ್ವಲ್ಪ ಯಾಮಾರಿದ್ವಿ, ಅವರು ಸುಳ್ಳು ಗ್ಯಾರಂಟಿಗಳನ್ನು ಹೇಳಿಕೊಂಡು ಲಾಟರಿ ಹೊಡೆದ ಹಾಗೆ ಅಧಿಕಾರಕ್ಕೆ ಬಂದಿದ್ದಾರೆ ಎಂದು ಹೇಳಿದರು.

ಆರು ತಿಂಗಳು ಸರ್ಕಾರ ನಡೆಸೋದೇ ಹೆಚ್ಚು, ಇನ್ನೂ ಸುಳ್ಳು ಆಶ್ವಾಸನೆ ಕೊಟ್ಟು ಅಧಿಕಾರದಲ್ಲಿ ಇರುತ್ತಾರಾ? ಎಲ್ಲಾ ಸಿಎಂಗಳಿದ್ದಾಗ ಮಳೆ ಬಂತು, ಬೆಳೆ ಕೂಡ ತುಂಬಾ ಚನ್ನಾಗಿ ಬಂದಿತ್ತು. ಆದರೆ ಸಿದ್ಧರಾಮಯ್ಯ ಬಂದಾಗ ಬೆಳೆನು ನಾಶವಾಯಿತು ಮಳೆನೂ ಹೋಯಿತು ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಕಿಡಿಕಾರಿದರು.

Exit mobile version