Site icon PowerTV

ತಲೆ ಮೇಲೆ ಬೋಡ್ರಸ್ ಕಲ್ಲು ಬಿದ್ದು ವ್ಯಕ್ತಿ ಸಾವು

ಶಿವಮೊಗ್ಗ : ಬಾವಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಬಿದ್ದು ಮೃತಪಟ್ಟಿರುವ ಘಟನೆ ಸಾಗರ ಪಟ್ಟಣದ ನೆಹರೂ ನಗರದ 9ನೇ ತಿರುವಿನಲ್ಲಿ ನಡೆದಿದೆ.

ರಾಮನಗರದ ಮೋಹನ (58) ಮೃತ ದುರ್ದೈವಿ. ಎಂಬ ವ್ಯಕ್ತಿ ಅರಳಿಕಟ್ಟೆ ಬಳಿಯ ಮನೆಯ ಬಾವಿಯೊಂದರಲ್ಲಿ ಸ್ವಚ್ಛತೆ ಮಾಡುವ ಕೆಲಸ ಮಾಡುತ್ತಿದ್ದರು. ಈ ವೇಳೆ ಮೇಲಿಂದ ಮೋಹನ ಅವರ ತಲೆಯ ಮೇಲೆ ಬೋಡ್ರಸ್ ಕಲ್ಲು ಜಾರಿ ಬಿದ್ದಿತ್ತು.

ಇದನ್ನು ಓದಿ : ಅಪ್ರಾಪ್ತನಿಗೆ ಬೈಕ್ ಓಡಿಸಲು ಕೊಟ್ಟಿದ್ದ ತಂದೆ ; ದಂಡ ವಿಧಿಸಿದ ನ್ಯಾಯಾಲಯ

ತಲೆಗೆ ತೀರ್ವ ಗಾಯಗೊಂಡಿದ್ದು, ದುರಾದೃಷ್ಡವಶಾತ್ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಪತ್ನಿ ಹಾಗೂ ಒಬ್ಬ ಮಗನನ್ನು ಬಿಟ್ಟು ಮೋಹನ್ ಅಗಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Exit mobile version