Site icon PowerTV

ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿದ ರಕ್ಷಿತ್ ಶೆಟ್ಟಿ ಅಂಡ್ ಟೀಮ್

ಉಡುಪಿ : ಕಡಲ ತಡಿಯಲ್ಲಿ ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿದ ನಟ ರಕ್ಷಿತ ಶೆಟ್ಟಿ ಹಾಗೂ ಸಪ್ತ ಸಾಗರದಾಚೆ ಎಲ್ಲೋ ತಂಡ.

ಅಷ್ಟಮಿ ಆಚರಣೆಯ ಹಿನ್ನೆಲೆ ಎಲ್ಲೆಲ್ಲೂ ಹುಲಿ ಕುಣಿತದ ಸಂಭ್ರಮ ತುಂಬಿ ತುಳುಕುತ್ತಿದೆ. ಆದ್ದರಿಂದ ಜಿಲ್ಲೆಯ ಮಲ್ಪೆ ಕೊಳ ಪರಿಸರದಲ್ಲಿ ಹುಲಿವೇಷ ಸ್ಪರ್ಧೆ ಆಯೋಜನೆ ಮಾಡಿದ್ದರು.

ಸದ್ಯ ಗೆಲುವಿನ ನಾಗಾಲೋಟದಲ್ಲಿರುವ ಸಪ್ತಸಾಗರದಾಚೆ ಎಲ್ಲೋ ತಂಡ ಅಷ್ಟಮಿ ಆಚರಣೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೆ ನಟ ರಕ್ಷಿತ್ ಶೆಟ್ಟಿಯ ಫೇವರೆಟ್ ಹುಲಿ ಕುಣಿತವಾಗಿದ್ದು, ಕುಣಿತದ ಸ್ಪರ್ಧೆಯಲ್ಲಿ ತಾಸೆಯ ಬೀಟ್​ಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿ ಖುಷಿ ಪಟ್ಟ ರಕ್ಷಿತ್ ಶೆಟ್ಟಿ.

ಇದನ್ನು ಓದಿ : ಶಾಲಾ ಮಕ್ಕಳ ಮೇಲೆ ಹರಿದ ಬಸ್ ; ಇಬ್ಬರ ಸ್ಥಿತಿ ಗಂಭೀರ

ಅವರ ಜೊತೆ ಚಿತ್ರದ ಹೀರೋಯಿನ್ ರುಕ್ಮಿಣಿ ವಸಂತ್, ಹಾಗು ನಿರ್ದೇಶಕ ಹೇಮಂತ್ ಅವರು ಕುಣಿದು ಕುಪ್ಪಳಿಸಿದರು.

Exit mobile version