Site icon PowerTV

ಇಸ್ಲಾಂ ಹುಟ್ಟಿನ ಬಗ್ಗೆ ಕೇಳುವ ಧೈರ್ಯ ಇದ್ಯಾ? : ಯತ್ನಾಳ್ ಪ್ರಶ್ನೆ

ವಿಜಯಪುರ : ಹಿಂದೂ ಧರ್ಮದ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಇಸ್ಲಾಂ ಧರ್ಮದ ಹುಟ್ಟಿನ ಬಗ್ಗೆ ಕೇಳುವ ಧೈರ್ಯ ಇದೆಯೇ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪರಮೇಶ್ವರ್ ಅವರು ಅಲ್ಲಾಹು ಕೃಪೆಯಿಂದ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಅಂತ ಘೋಷಿಸಿಕೊಂಡಿದ್ದಾರೆ. ಪರಮೇಶ್ವರ ಅವರು ಯಾರನ್ನು ಓಲೈಸಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ? ನಿಮ್ಮ ನಿಜ ಬಣ್ಣ ಇದೆಯೋ ಅಥವಾ ನಿಮ್ಮ ರಾಜಕೀಯಕ್ಕಾಗಿ  ಹೇಳಿಕೆಯೋ? ಎಂದು ವಾಗ್ದಾಳಿ ನಡೆಸಿದ್ದಾರೆ.

ನಾವು ಹಿಂದುಗಳಲ್ಲವೆಂದು ಹೇಳಿಕೊಳ್ಳುವವರು ಅವರ 3ನೇ ತಲೆಮಾರಿನ ವ್ಯಕ್ತಿಯ ಹೆಸರನ್ನು ಸಂಶೋಧನೆ ಮಾಡಲಿ ಅವರೂ  ಹಿಂದುವೇ ಆಗಿರುತ್ತಾರೆ. ಹಿಂದೂ ಧರ್ಮ ಬದುಕುವ ರೀತಿ, ಅದು ಮತವಲ್ಲ. ಹಿಂದುತ್ವ ಈ ದೇಶದ ಆತ್ಮ. ಈ ದೇಶ, ಸಂವಿಧಾನದ ಮೌಲ್ಯಗಳು ಹಾಗು ಪ್ರಜಾಪ್ರಭುತ್ವ ಉಳಿದಿರುವುದೇ ಹಿಂದೂಗಳು ಬಹುಸಂಖ್ಯಾತರಾಗಿರುವ ಕಾರಣ ಎಂದು ಹೇಳಿದ್ದಾರೆ.

Exit mobile version