Site icon PowerTV

ಹೆಸ್ರು ಬದಲಿಸಿದ್ರೆ ಎರಡು ಕೋಟಿ ಉದ್ಯೋಗ ಬರುತ್ತಾ? : ಕಾಂಗ್ರೆಸ್

ಬೆಂಗಳೂರು : ಇಂಡಿಯಾ ಬದಲು ಭಾರತ್ ಹೆಸರು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ಚಿಂತನೆಗೆ ರಾಜ್ಯ ಕಾಂಗ್ರೆಸ್​ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂಡಿಯಾ ಹೆಸರು ಬದಲಿಸಿದರೆ ಯುವಕರ ನಿರುದ್ಯೋಗ ಸಮಸ್ಯೆ ಬಗೆಹರಿದು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯಾಗುತ್ತದೆಯೇ? ಎಂದು ಪ್ರಶ್ನಿಸಿದೆ.

ಭಾರತ್ ಎಂದು ಹೆಸರು ಮರುನಾಮಕರಣ ಮಾಡಿದ್ರೆ, ಒಂದು ಡಾಲರ್ ಹದಿನೈದು ರೂಪಾಯಿ ಆಗುತ್ತದೆಯೇ? ಕುಸಿದ ಅರ್ಥ ವ್ಯವಸ್ಥೆ ಪುಟ್ಟಿದೇಳುವುದೇ? ಚೀನಾ ಆಕ್ರಮಿಸಿದ ಭಾರತದ ನೆಲವನ್ನು ಬಿಟ್ಟು ‘ಇಂಡಿಯಾ’ದ ನೆಲದತ್ತ ಗಮನಿಸುವುದೇ ಎಂದು ಕುಟುಕಿದೆ.

ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ಕಂಡಿದೆ. ಕೇಂದ್ರ ಸರ್ಕಾರ ಮಾತ್ರ ದೇಶದ ಹೆಸರಿನ ಬಗ್ಗೆ ತಲೆ ಕೆಡಿಸಿಕೊಂಡಿದೆ. ಕೇಂದ್ರ ಸರ್ಕಾರಕ್ಕೆ ದೇಶದ ಜನರ ಸಮಸ್ಯೆ ಗಮನಕ್ಕೆ ಬರುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್​ ವಾಗ್ದಾಳಿ ನಡೆಸಿದೆ.

Exit mobile version