Site icon PowerTV

ಮುದ್ದು ಕೃಷ್ಣನಾಗಿ ಮಿಂಚಿದ ನಟ ನಿಖಿಲ್ ಕುಮಾರ್ ಪುತ್ರ

ಬೆಂಗಳೂರು : ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಮುದ್ದು ಕೃಷ್ಣನಾಗಿ ಮಿಂಚಿದ ನಟ ನಿಖಿಲ್ ಕುಮಾರ್ ಪುತ್ರ ಆವ್ಯಾನ್ ದೇವ್ .

ಕೃಷ್ಣಾ ಜನ್ಮಾಷ್ಟಮಿ ಆಚರಣೆ ಸಂಭ್ರಮದ ಹಿನ್ನೆಲೆ ನಿಖಿಲ್ ಕುಮಾರ್ ಅವರ ಪುತ್ರ ಆವ್ಯಾನ್ ದೇವ್ ಗೆ ಮುದ್ದು ಕೃಷ್ಣನ ವೇಷವನ್ನು ಹಾಕಿಸಿ ಮಸ್ತ್ ಫೋಟೋಶೂಟ್ ಮಾಡಿಕೊಂಡ ನಿಖಿಲ್ ಕುಮಾರ್ ಅವರ ಕುಟುಂಬ.

ಇನ್ನೂ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರೋ ಕುಮಾರಸ್ವಾಮಿ ಕುಟುಂಬ ಮೊಮ್ಮಗನ ಜೊತೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮಿಸಿ, ಮುದ್ದುಕೃಷ್ಣನಾಗಿ ಮಿಂಚಿದ ಮೊಮ್ಮಗ ಆವ್ಯಾನ್ ದೇವ್ ನ ತುಂಟಾಟವನ್ನು ಕಂಡು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ದಂಪತಿ ಸಂತಸ ಪಟ್ಟಿದ್ದಾರೆ.

ಇದನ್ನು ಓದಿ : ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿದ ರಕ್ಷಿತ್ ಶೆಟ್ಟಿ ಅಂಡ್ ಟೀಮ್

ಪುಟ್ಟ ಕೃಷ್ಣನಾಗಿ ಮಿಂಚಿದ ಆವ್ಯಾನ್ ದೇವ್ ಜೊತೆ ನಿಖಿಲ್ ಕುಮಾರ್ ,ಪತ್ನಿ ರೇವತಿ, ಹಾಗೂ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಎಲ್ಲರೂ ಒಟ್ಟಾಗಿ ಸೇರಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ನಿಖಿಲ್ ಅವರು ಹೊಸ ಸಿನಿಮಾದಲ್ಲಿ ಬ್ಯುಸಿ ಆಗಿದ್ದರು ಸಹ ತಪ್ಪದೇ ಮನೆಯ ಎಲ್ಲ ಸಮಾರಂಭದಲ್ಲಿ ಭಾಗಿ ಆಗುವ ನಿಖಿಲ್ ಕುಮಾರ್ ರವರು.

Exit mobile version