Site icon PowerTV

ಬೆಂಗಳೂರು-ಮಂಗಳೂರು ರೈಲು ಮುರುಡೇಶ್ವರವರೆಗೆ ವಿಸ್ತರಣೆ : ಮಾರ್ಗ, ಟೈಮ್ ವಿವರ ಇಲ್ಲಿದೆ

ಬೆಂಗಳೂರು : ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಂಗಳೂರಿಗೆ ಸಂಚರಿಸುತ್ತಿದ್ದ ರೈಲನ್ನು ಮುರುಡೇಶ್ವರದವರೆಗೂ ವಿಸ್ತರಿಸುವುದಾಗಿ ಭಾರತೀಯ ರೈಲ್ವೇ ಸಚಿವಾಲಯ ತಿಳಿಸಿದೆ.

ಬೆಂಗಳೂರು ಹಾಗೂ ಮೈಸೂರು ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಎಕ್ಸ್‌ಪ್ರೆಸ್ ಟ್ರೈನ್​ ಮುರುಡೇಶ್ವರದವರೆಗೆ ವಿಸ್ತರಿಸಿ, ಮಂಗಳೂರಿನಿಂದ ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್‌ ಅನ್ನು ಮುರುಡೇಶ್ವರದಿಂದ ಆರಂಭಿಸುವಂತೆ ಇಲಾಖೆ ಆದೇಶ ಹೊರಡಿಸಿದೆ.

ಇನ್ನು, ಈ ರೈಲು ಬೈಯಪ್ಪನಹಳ್ಳಿಯಿಂದ ಹೊರಟು ರಾತ್ರಿ 9ಕ್ಕೆ ಮೆಜೆಸ್ಟಿಕ್‌ಗೆ ಬರಲಿದ್ದು, ಮೈಸೂರು, ಮಂಗಳೂರು, ಉಡುಪಿ, ಕುಂದಾಪುರ ಮಾರ್ಗವಾಗಿ ಮುರುಡೇಶ್ವರ ಸೇರಲಿದೆ. ಬಳಿಕ ಮುರುಡೇಶ್ವರದಿಂದ ಮಧ್ಯಾಹ್ನ 3.30ಕ್ಕೆ ಹೊರಟು, ಬೆಳಗ್ಗೆ 6ಕ್ಕೆ ಬೆಂಗಳೂರು ಸೇರುತ್ತದೆ ಎಂದು ರೈಲ್ವೆ ಸಚಿವಾಲಯದ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಹಾಗೂ ಗೌತಮ ಶೆಟ್ಟಿ ತಿಳಿಸಿದ್ದಾರೆ.

Exit mobile version