Site icon PowerTV

ವಕೀಲರನ್ನು ನಿಂದಿಸಿದ ಆರೋಪ ; ಬೀದಿಗಿಳಿದು ಪ್ರತಿಭಟನೆ

ಮೈಸೂರು : ವಕೀಲರೊಬ್ಬರಿಗೆ ನಿಂದಿಸಿದ ಹಿನ್ನೆಲೆ ಡಿವೈಎಸ್ಪಿ ಅಮಾನತು ಮಾಡಿ ಎಂದು ವಕೀಲರಿಂದ ಪ್ರತಿಭಟನೆ ನಡೆಯುತ್ತಿರುವ ಘಟನೆ ಜಿಲ್ಲೆಯ ನ್ಯಾಯಾಲಯದ ಮುಂಭಾಗದಲ್ಲಿ ನಡೆಯುತ್ತಿದೆ.

ಹುಣುಸೂರಿನ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ವಕೀಲರಾಗಿದ್ದ ಆಶಾ ಎಂಬುವರಿಗೆ ಹುಣಸೂರಿನ ಡಿವೈಎಸ್ಪಿ ಮಹೇಶ್ ಅವರು ಅವ್ಯಾಚ್ಯ ಶಬ್ದಗಳಿಂದ ನಿಂದನೆಯನ್ನು ಮಾಡಿದ್ದರು. ಈ ಆರೋಪದ ಹಿನ್ನೆಲೆ ನ್ಯಾಯಾಲಯದ ಕಾರ್ಯ ಕಲಾಪಗಳಿಂದ ಹೊರಗುಳಿದ ವಕೀಲರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.

ಇದನ್ನು ಓದಿ : ಹೆಸ್ರು ಬದಲಿಸಿದ್ರೆ ಎರಡು ಕೋಟಿ ಉದ್ಯೋಗ ಬರುತ್ತಾ? : ಕಾಂಗ್ರೆಸ್

ಡಿವೈಎಸ್ಪಿ ಮಹೇಶ್ ಅವರನ್ನು ಅಮಾನತು ಮಾಡಬೇಕು ಹಾಗೂ ಶಿಸ್ತು ಕ್ರಮ ಜರುಗಿಸಬೇಕು ಎಂದು, ಗಾಂಧೀಜಿ ಪ್ರತಿಮೆ ಬಳಿ ಮಾನವ ಸರಪಳಿ ನಿರ್ಮಿಸಿ ಮೈಸೂರು ವಕೀಲರ ಸಂಘದ ಅಧ್ಯಕ್ಷ ಮಹಾದೇವಸ್ವಾಮಿ, ಉಪಾಧ್ಯಕ್ಷ ಪುಟ್ಟಸಿದ್ದೇಗೌಡ ಹಾಗೂ ಕಾರ್ಯದರ್ಶಿ ಉಮೇಶ್ ಸೇರಿದಂತೆ ನೂರಾರು ವಕೀಲರು ಪ್ರತಿಭಟನೆಗೆ ಇಳಿದಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದು, ಕೋರ್ಟ್​ ಆಸುಪಾಸಿನಲ್ಲಿ ವಕೀಲರು ಸುತ್ತುವರೆದಿದ್ದು ರಸ್ತೆ ಸಂಪೂರ್ಣ ಬಂದ್ ಮಾಡಲಾಗಿತ್ತು.

Exit mobile version