Site icon PowerTV

ರಾಹುಲ್ ಗಾಂಧಿಗೆ ತಲೆ ಇಲ್ಲ : ಶ್ರೀರಾಮುಲು

ಬಳ್ಳಾರಿ : ತಮಿಳುನಾಡು ಸಿಎಂ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ಬಗ್ಗೆ ನೀಡಿರುವ ಹೇಳಿಕೆಯನ್ನು ಮಾಜಿ ಸಚಿವ ಬಿ. ಶ್ರೀರಾಮುಲು ಖಂಡಿಸಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿರುವ ಅವರು, ಸನಾತನ ಧರ್ಮದ ಬಗ್ಗೆ ಅವನಿಗೆ ಏನು ಗೊತ್ತಿದೆ. ಉತ್ತರ ಭಾರತದಲ್ಲಿ ರಾಹುಲ್ ಗಾಂಧಿ ಅಂತ ಒಬ್ಬ ಪಪ್ಪು ಇದ್ದಾನೆ. ಅದರಂತೆ ದಕ್ಷಿಣ ಭಾರತದಲ್ಲಿ ಉದಯನಿಧಿ ಸ್ಟಾಲಿನ್ ಎಂಬ ಪಪ್ಪಿ ಸೃಷ್ಠಿಯಾಗಿದ್ದಾನೆ. ಇಬ್ಬರಿಗೆ ತಲೆಯಿಲ್ಲ, ಸನಾತನ ಧರ್ಮದ ಬಗ್ಗೆ ತಿಳಿದು ಮಾತನಾಡಲಿ ಎಂದು ಲೇವಡಿ ಮಾಡಿದ್ದಾರೆ.

ಒಂದು ಧರ್ಮವನ್ನು ಒಲೈಸಲು ಸನಾತನ ಧರ್ಮದ ಬಗ್ಗೆ ಮಾತನಾಡುತ್ತಾರೆ. 2024ಕ್ಕೆ ಸಂಪೂರ್ಣ ಬಹುಮತದಿಂದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಇವರು ಏನೇ ತಿಪ್ಪರಲಾಗ ಹಾಕಿದ್ರೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲ್ಲ. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ ಎಂದು ಹೇಳಿದ್ದಾರೆ.

Exit mobile version