Site icon PowerTV

ಪರಮೇಶ್ವರ್ ಹೆಸರಲ್ಲೇ ಈಶ್ವರ ಇದ್ದಾನೆ : ವಿಜಯೇಂದ್ರ

ಬೆಂಗಳೂರು : ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ಹರಿಬಿಟ್ಟ ಗೃಹ ಸಚಿವ ಡಾ.ಜಿ ಪರಮೇಶ್ವರ್​ಗೆ ಶಾಸಕ ಬಿ.ವೈ ವಿಜಯೇಂದ್ರ ತಿರುಗೇಟು ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪರಮೇಶ್ವರ್ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಪರಮೇಶ್ವರ್ ಹೆಸರಲ್ಲೇ ಈಶ್ವರ ಇದ್ದಾನೆ. ಪ್ರಕೃತಿಯನ್ನು ಯಾರು ಹುಟ್ಟಿಸಿದ್ದು ಅಂತ ಹೇಳಲು ಸಾಧ್ಯವೇ? ಕಾಂಗ್ರೆಸ್​ ಮೊಸರಲ್ಲಿ ಕಲ್ಲು ಹುಡುಕುತ್ತಿದೆ. ಕಾಂಗ್ರೆಸ್ಸಿಗರು  ಎಲ್ಲವನ್ನೂ ಎಲೆಕ್ಷನ್ ದೃಷ್ಟಿಯಿಂದಲೇ ಅಳೆಯುತ್ತಿದ್ದಾರೆ. ಅವರಿಗೆ ಭಾರತ ಅಂತ ಕರೆಯುವುದಕ್ಕೆ ಅವಮಾನ ಎಂದು ಕಿಡಿಕಾರಿದ್ದಾರೆ.

ಸರ್ಕಾರಕ್ಕೆ ಮಂಪರು ಕವಿದಿದೆ

ಪ್ರತಿ‌ನಿತ್ಯ ನುಡಿದಂತೆ ನಡೆದ ಸರ್ಕಾರ ಎನ್ನೋ ಜಾಹಿರಾತು ನೋಡ್ತಿವಿ. ಹೀಗಾಗಿ, ರಾಜ್ಯದಲ್ಲಿ ಸಮಸ್ಯೆಗಳ  ಸರಮಾಲೆಯೇ ಎದ್ದು ಕಾಣ್ತಿದೆ. ಕರ್ನಾಟಕದಲ್ಲಿ ಭೀಕರ ಬರದ ಛಾಯೆ ಅವರಿಸಿದೆ. ಆದ್ರೆ, ರಾಜ್ಯ ಸರ್ಕಾರಕ್ಕೆ ಮಂಪರು ಕವಿದಿದೆ. ಇದಕ್ಕೆ ನಾವು ಎಚ್ಚರಿಸಬೇಕು ಎಂದು ವಿಜಯೇಂದ್ರ ಚಾಟಿ ಬೀಸಿದ್ದಾರೆ.

Exit mobile version