Site icon PowerTV

ಅರಬ್, ಸೌದಿಯಲ್ಲಿ ಹುಟ್ಟಿದ್ರೆ ನಿನ್ನ ಖೇಲ್ ಖತಂ ಆಗ್ತಿತ್ತು : ಸಿ.ಟಿ ರವಿ

ಬೆಂಗಳೂರು : ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ಬಗ್ಗೆ ಲಘುವಾಗಿ ನೀಡಿರುವ ಹೇಳಿಕೆಗೆ ಮಾಜಿ ಸಚಿವ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನೀನು ಅರಬ್, ಸೌದಿ ಭಾಗದಲ್ಲಿ ಹುಟ್ಟಿದ್ದರೆ ನಿನ್ನ ಖೇಲ್ ಖತಂ ಆಗ್ತಾ ಇತ್ತು. ನೀನು ಈ ಕಾರಣಕ್ಕೆ ಲಕ್ಕಿ ಎಂದು ಕುಟುಕಿದ್ದಾರೆ.

ಬಹುಸಂಖ್ಯಾತ ಹಿಂದೂಗಳು ಇರುವ ದೇಶದಲ್ಲಿ ನೀನು ಹುಟ್ಟಿದ್ದೀಯ. ನೀನು ಬೇರೆ ಕಡೆ ಹುಟ್ಟಿದ್ದರೆ ನಿನ್ನ ಕಥೆ ಮುಗಿಯುತ್ತಿತ್ತು. ಆದರೂ, ಯಾರೋ ತಲೆಗೆ ಬೆಲೆ ಕಟ್ಟಿದ್ದಾರೆ. ನಮ್ಮ ದೇಶದಲ್ಲಿ ಅಷ್ಟು ಬೇಗ ಯಾರು ತಲೆ ತೆಗೆಯಲ್ಲ ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

You are Lucky..!

ಭಾರತ ಅನ್ನೋದು ನಮ್ಮ ಅಸ್ತಿತ್ವ, ಅಸ್ಮಿತೆ. ಭಾರತ ಅನ್ನೋದು ಆತ್ಮ. ಉದಯ್ ನಿಧಿ ಸ್ಟಾಲಿನ್ You are Lucky..! ನಮ್ಮ ಸನಾತನ ಧರ್ಮದಲ್ಲಿ ಪ್ರಶ್ನೆಗೆ, ಟೀಕೆಗೆ ಅವಕಾಶ ಇದೆ. ವ್ಯಕ್ತಿ ಆತ್ಮ ಹೀನನಾದರೆ, ಏನು ಎಂದು ಕರೆಯುತ್ತೇವೋ, ಹಾಗೆಯೇ ಒಂದು ದೇಶ ತನ್ನ ಅಸ್ಮಿತೆಯನ್ನು ಕಳೆದುಕೊಂಡರೆ ಏನಾಗುತ್ತದೆ? ಎಂದು ಸಿ.ಟಿ ರವಿ ಪ್ರಶ್ನಿಸಿದ್ದಾರೆ.

Exit mobile version