Site icon PowerTV

ನಾನು ಒಬ್ಬ ಹಿಂದೂ, ಭಾರತೀಯ : ಡಿ.ಕೆ ಶಿವಕುಮಾರ್

ಬೆಂಗಳೂರು : ಹಿಂದೂ ಧರ್ಮಕ್ಕೆ ಅಪ್ಪ-ಅಮ್ಮ ಇಲ್ಲ ಎಂಬ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಒಬ್ಬ ಹೆಮ್ಮೆಯ ಭಾರತೀಯ ಮತ್ತು ಹಿಂದೂ ಎಂದು ಹೇಳಿದ್ದಾರೆ.

ದೇಶದ ಹೆಸರು ಭಾರತ್ ಎಂದು ಬದಲಿಸುವ ಕೇಂದ್ರದ ನಡೆಯ ಬಗ್ಗೆ ಮಾತನಾಡಿದ ಅವರು, ಮೊದಲು ಹೆಸರು ಬದಲಾವಣೆ ಮಾಡೋದು ಅಲ್ಲ. ಬದುಕಿನಲ್ಲಿ  ಏನಾದರೂ ಬದಲಾವಣೆ ಆಗಬೇಕು. ಆದಾಯ ಡಬಲ್ ಮಾಡ್ತಿನಿ ಅಂದ್ರು ‌ಅದು  ಆಯ್ತಾ? ಎಂದು ಪ್ರಶ್ನಿಸಿದ್ದಾರೆ.

ಬೆಲೆ ಏರಿಕೆ ನಿಂತಿದ್ಯಾ? ಹೆಸರು ಬದಲಾವಣೆಯಿಂದ ಏನು ಆಗಲ್ಲ. ಜನರಿಗೆ ಅನುಕೂಲ‌ ಆಗುವ ಕಾನೂನು ಮಾಡಲಿ. ಆರ್​ಟಿಐ, ಉಳುವವನೇ ಭೂಮಿಯ ಒಡೆಯ ತರಹದ ಕಾನೂನು ಮಾಡಲಿ. ಆಗ ನಾವು ಒಪ್ಪುತ್ತೇವೆ ಎಂದು ಹೇಳಿದ್ದಾರೆ.

Exit mobile version