Site icon PowerTV

ಕನಕಪುರ ಜನರು ಛೀ.. ಥೂ.. ಅಂತಿದ್ದಾರೆ : ಅಶ್ವತ್ಥನಾರಾಯಣ

ಬೆಂಗಳೂರು : ಮೆಡಿಕಲ್ ಕಾಲೇಜು ಸ್ಥಳಾಂತರ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೆಂಗಲ್ ಹನುಮಂತಯ್ಯ ಹೆಸರಿನಲ್ಲಿ ರಾಮನಗರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಆಗಬೇಕಿತ್ತು. ಕನಕಪುರದ ಜನರು ಕೂಡ ಇವರಿಗೆ ಛೀ.. ಥೂ.. ಅಂತಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಮನಗರ ಜನತೆಗೆ ಅಗೌರವ ತೋರಿದ್ದಾರೆ. ಕಾಂಗ್ರೆಸ್​ ಸರ್ಕಾರದಲ್ಲಿ ಪವರ್ ಫುಲ್ ಅಂತಾರೆ. ರಾಮನಗರದಿಂದ ಕಳ್ಳತನ ಮಾಡಿಕೊಂಡು ಹೋಗೋದನ್ನು ಯಾರು ಒಪ್ಪೋದಿಲ್ಲ. ಜನರು ಇವರಿಗೆ ತಕ್ಕ ಪಾಠ ಕಲಿಸುತ್ತಾರೆ. ಕೊತ್ವಾಲ್ ಹಿಂಬಾಲಕರು ನನ್ನ ಬಗ್ಗೆ ಮಾತಾಡ್ತಾರಾ? ಎಂದು ಮತ್ತೆ ಡಿ.ಕೆ ಶಿವಕುಮಾರ್ ವಿರುದ್ಧ ಗುಡುಗಿದ್ದಾರೆ.

ಕೊತ್ವಾಲ್​ಗೆ ಟೀ, ಕಾಫಿ ಕೊಟ್ಟವರು

ಭಗವಂತನೋ, ಜನರ ಆಶೀರ್ವಾದದಿಂದ ಅವರು ಒಂದು ಸ್ಥಾನಕ್ಕೆ ಬಂದಿದ್ದಾರೆ. ಇಂತಹ ಅಹಂಕಾರ ಮಾತುಗಳನ್ನು ಬಿಡಿ. ಕೊತ್ವಾಲ್ ಹಿಂಬಾಲಕರು, ಕೊತ್ವಾಲ್​ಗೆ ಟೀ, ಕಾಫಿ ಕೊಟ್ಟವರು ಮಾತಾಡ್ತಾರೆ. ಆಲೂಗೆಡ್ಡೆ ಹಾಕಿ ಬಂಗಾರ ತೆಗೆಯೋ ಇತಿಹಾಸ ಇರೋರು. ಇವರಿಗೆ ನನ್ನ ಬಗ್ಗೆ ಮಾತಾಡಲು ಅರ್ಹತೆಯೂ ಇಲ್ಲ, ಯೋಗ್ಯತೆಯೂ ಇಲ್ಲ ಎನ್ನುವ ಮೂಲಕ ನವರಂಗಿ ನಾರಾಯಣ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.

Exit mobile version