Site icon PowerTV

ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಸಂಭ್ರಮಿಸಿದ ನಟಿ ಅಮೂಲ್ಯ : ಇಲ್ಲಿವೆ ಕ್ಯೂಟ್ ಫೋಟೋಗಳು

ಬೆಂಗಳೂರು : ಇಂದು ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಈ ಹಬ್ಬದಂದು ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಸಂಭ್ರಮ ಪಡುತ್ತಾರೆ. ಅದೇ ರೀತಿ ಅಮೂಲ್ಯ ಅವರು ಮಕ್ಕಳಿಗೆ ಕೃಷ್ಣನ ವೇಷ ಹಾಕಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿದೆ.

ಅಮೂಲ್ಯ ಅವರು ಮಕ್ಕಳಿಗೆ ಅಥರ್ವ್ ಹಾಗೂ ಆಧವ್ ಎಂದು ಹೆಸರು ಇಟ್ಟಿದ್ದಾರೆ. ಇವರ ಕ್ಯೂಟ್ ಫೋಟೋಗಳನ್ನು ಅಮೂಲ್ಯ ಆಗಾಗ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಈಗ ಇವರ ಕೃಷ್ಣನ ಗೆಟಪ್ ಸಾಕಷ್ಟು ಗಮನ ಸೆಳೆದಿದೆ.

ನಟ ರಿಷಬ್ ಶೆಟ್ಟಿ ಅವರ ಮನೆಯಲ್ಲೂ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿತ್ತು. ಈ ಕುರಿತು ಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ ಅವರು, ನಮ್ಮ ಮನೆಯ ಮುದ್ದು ರಾಧಾ ಕೃಷ್ಣರಿಂದ ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಎಂದು ಪೋಸ್ಟ್ ಮಾಡಿದ್ದಾರೆ.

ಇಸ್ಕಾನ್​​ನಲ್ಲಿ ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಟಮಿ

ಇಂದು ಇಸ್ಕಾನ್‌ನಲ್ಲಿ ಕೃಷ್ಣಜನ್ಮಾಷ್ಟಮಿ ಆಚರಣೆ ಹಿನ್ನೆಲೆ ಮಹೋತ್ಸವ್ ಚೈತನ್ಯ ಪ್ರಭು ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ಇಸ್ಕಾನ್‌ ದೇವಾಲಯದಲ್ಲಿ ಮಾತನಾಡಿದ ಅವರು, ಇಸ್ಕಾನ್​​ನಲ್ಲಿ ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಆಗ್ತಾಯಿದೆ. ಕೃಷ್ಣ ಸರ್ವ ಆಕರ್ಷಕ, ರೋಹಿಣಿ ನಕ್ಷತ್ರದಲ್ಲಿ ಕೃಷ್ಣನ ಜನನ ಆಗಿದೆ ಎಂದರು.

ನಾಳೆಯೂ ಶ್ರೀಕೃಷ್ಣ ಜನ್ಮಾಷ್ಟಮಿ

ಮುಖ್ಯ ಮಂದಿರದಲ್ಲಿ ದಕ್ಷಿಣ ಭಾರತದ ಶೈಲಿಯಲ್ಲಿ ಅಲಂಕಾರ ಮಾಡಲಾಗಿದೆ. ವಸ್ತ್ರ ಹಾಗೂ ಆಭರಣದಿಂದ ಕೃಷ್ಣನಿಗೆ ಅಲಂಕಾರ ಮಾಡಲಾಗಿದೆ. ನಾಳೆಯೂ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಆಗಲಿದೆ. ನಾಳೆ 108 ಖಾದ್ಯಗಳ ನೈವೇದ್ಯ ಆಗಲಿದೆ. ನಂತರ ಅದನ್ನ ಪ್ರಸಾದ ರೀತಿಯಲ್ಲಿ ವಿನಿಯೋಗ ಮಾಡಲಾಗುತ್ತದೆ. ಇಂದು  ಮೂರು ಬಾರಿ, ನಾಳೆ ಐದು ಬಾರಿ ಕೃಷ್ಣನಿಗೆ ಅಭಿಷೇಕ ಮಾಡಲಾಗುತ್ತದೆ ಎಂದು ಹೇಳಿದರು.

Exit mobile version