Site icon PowerTV

ಟೀಂ ಭಾರತ್ ಎಂದು ಜೆರ್ಸಿ ಬದಲಿಸಿ : ವೀರೇಂದ್ರ ಸೆಹ್ವಾಗ್

ಬೆಂಗಳೂರು : I.N.D.I.A ಬದಲು ದೇಶದ ಹೆಸರನ್ನು ‘ರಿಪಬ್ಲಿಕ್ ಆಫ್ ಭಾರತ್’ ಎಂದು ಬದಲಾಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ ಬೆನ್ನಲ್ಲೇ ಈಗ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಬಿಸಿಸಿಐಗೆ ಆಗ್ರಹವೊಂದನ್ನು ಮಾಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸೆಹ್ವಾಗ್, ಟೀಂ ಇಂಡಿಯಾದ ಜೆರ್ಸಿಯಲ್ಲಿ ಹೆಸರು ಬದಲಾವಣೆ ಮಾಡಿ. ಟೀಂ ಇಂಡಿಯಾ ಬದಲಿಗೆ ಟೀಂ ಭಾರತ್ ಅಂತ ಜೆರ್ಸಿ ಬದಲಿಸುವಂತೆ ಬಿಸಿಸಿಐಗೆ ಮಾಜಿ ಕ್ರಿಕೆಟಿಗ ಒತ್ತಾಯಿಸಿದ್ದಾರೆ.

ಅಲ್ಲದೆ ಈ ವಿಶ್ವಕಪ್‍ನಲ್ಲಿ ನಾವು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಬುಮ್ರಾ, ರವೀಂದ್ರ ಜಡೇಜಾ ಅವರನ್ನು ಹುರಿದುಂಬಿಸುತ್ತೇವೆ. ನಮ್ಮ ಹೃದಯದಲ್ಲಿ ಭಾರತೀಯರು ಎಂಬುದೇ ಇರಲಿ ಮತ್ತು ಆಟಗಾರರು ‘ಭಾರತ್’ ಇರುವ ಜೆರ್ಸಿಯನ್ನು ಧರಿಸುತ್ತಾರೆ ಎಂದು ತಿಳಿಸಿದ್ದಾರೆ.

ವೀರೇಂದ್ರ ಸೆಹ್ವಾಗ್‌ ಮೊದಲೇ ಭಾರತ್‌ ಹೆಸರನ್ನು ಟ್ವೀಟ್‌ ಮಾಡಿದ್ದರು. ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಕಪ್‌ ಕ್ರಿಕೆಟ್‌ ಪಂದ್ಯದ ವೇಳೆ #BHAvsPAK ಎಂಬ ಹ್ಯಾಶ್‌ಟ್ಯಾಗ್‌ ಬಳಸಿದ್ದರು.

Exit mobile version