Site icon PowerTV

ಅಪ್ಪಾಜಿ INDIA ಅನ್ನಬೇಡಿ ಭಾರತ ಅನ್ನಿ ಅಂತಿದ್ರು : ನಟ ರಾಘಣ್ಣ

ಬೆಂಗಳೂರು : ಅಪ್ಪಾಜಿ ನಮಗೆ ಯಾವಾಗಲೂ ಹೇಳೋರು.. I.N.D.I.A ಅನ್ನೋದನ್ನು ನಿಲ್ಲಿಸಬೇಕು, ಭಾರತ ಅನ್ನಬೇಕು ಅಂತಿದ್ರು ಎಂದು ನಟ ರಾಘವೇಂದ್ರ ರಾಜ್​ಕುಮಾರ್ ಹೇಳಿದ್ದಾರೆ.

ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡಿದ್ದ ಅವರು, ತಂದೆ ಡಾ.ರಾಜ್ ಕುಮಾರ್ ಅವರ ಹಳೆ ನೆನಪು ಮೆಲುಕು ಹಾಕಿದ್ದರು.

ನಾವು ದೇಶದ ಮೇಲೆ ಪ್ರೀತಿ, ಭಕ್ತಿ ಜಾಸ್ತಿ ಮಾಡಿಕೊಳ್ಳಬೇಕು. ಯಾರಾದರೂ ನಿಮ್ಮನ್ನು ಯಾವ ದೇಶ ಅಂದ್ರೆ ಭಾರತ ಅಂತ ಹೇಳಿ. ನಾನು ನಮ್ಮ ತಂದೆ ಹೇಳಿದ ಮಾತನ್ನು ಇಂದು ನಿಮ್ಮ ಜೊತೆ ಹಂಚಿಕೊಳ್ತಿದ್ದೀನಿ ಎಂದು ರಾಘಣ್ಣ ಹೇಳಿದ್ದರು.

‘ಭಾರತ್’ ಎಂದು ಮರುನಾಮಕರಣ

ಇದೀಗ, ಕೇಂದ್ರ ಸರ್ಕಾರ ಸೆಪ್ಟೆಂಬರ್ 18 ರಿಂದ 22 ರವರೆಗೆ ಐದು ದಿನಗಳ ಕಾಲ ನಡೆಯಲಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ ಪ್ರಧಾನಿ I.N.D.I.A ವನ್ನು ‘ಭಾರತ್’ ಎಂದು ಮರುನಾಮಕರಣ ಮಾಡುವ ನಿರ್ಣಯ ಮಂಡಿಸುವ ಸಾಧ್ಯತೆಯಿದೆ.

Exit mobile version