Site icon PowerTV

ತಮಿಳರು ರೈಲು ಹತ್ತಿ ತಮಿಳುನಾಡಿಗೆ ಹೋಗಲಿ : ವಾಟಾಳ್ ನಾಗರಾಜ್

ಬೆಂಗಳೂರು : ಕರ್ನಾಟಕದಲ್ಲಿರುವ ತಮಿಳರು ಯಾವ ನೀರು ಕುಡಿಯುತ್ತಿದ್ದಾರೆ? ಸ್ಟಾಲಿನ್ ಇಲ್ಲಿರೋ ತಮಿಳರಿಗೆ ಕೇಳಲಿ ಎಂದು ಕನ್ನಡಪರ ಹೋರಾಟ ವಾಟಾಳ್ ನಾಗರಾಜ್ ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಿಂದ ಎಲ್ಲಾ ತಮಿಳರು ವಾಪಸ್ ತಮಿಳುನಾಡಿಗೆ ಬರಲಿ ಅಂತ ವಾಪಸ್ ಕರೆಸಿಕೊಳ್ಳಲಿ. ಇಲ್ಲಿರೋ ಎಲ್ಲಾ ತಮಿಳರು ದೊಡ್ಡ ಟ್ರೈನ್ ಹತ್ತಿ ತಮಿಳುನಾಡಿಗೆ ಹೋಗಲಿ ಎಂದು ಗರಂ ಆದರು.

ನಾಳೆ ರಾಜ್ಯ ಸಂಸದರ ಬಹಿರಂಗ ಹರಾಜು ಮಾಡುವುದಾಗಿ ವಾಟಾಳ್ ನಾಗರಾಜ್ ಘೋಷಣೆ ಮಾಡಿದರು. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಹರಾಜು ಮಾಡಲಿದ್ದೇವೆ. ರಾಜ್ಯದ ಸಂಸದರನ್ನು ಯಾರು, ಎಷ್ಟು ಬೇಕಾದ್ರೂ ಕೊಟ್ಟು ಕೊಂಡು ಕೊಳ್ಳಬಹುದು ಎಂದು ಸಂಸದರ ವಿರುದ್ಧ ಕಿಡಿಕಾರಿದರು.

ಕಾವೇರಿ ಬಗ್ಗೆ ಬಹಳ ನೋವಾಗುತ್ತೆ

ಕಾವೇರಿ ಬಗ್ಗೆ ಬಹಳ ನೋವಾಗುತ್ತೆ. ನೀರನ್ನು ಅಡೆ-ತಡೆ ಇಲ್ಲದೆ ತಮಿಳುನಾಡಿಗೆ ಹರಿಸುತ್ತಿದ್ದಾರೆ. ಇದು ಯಾರಿಗೂ ಗೌರವ ತರುವಂತದ್ದಲ್ಲ, ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಸಂಸದರು ಏನು ಮಾಡ್ತಿದ್ದಾರೆ? ತಮಿಳುನಾಡಿನವರು ನಮ್ಮ‌ ಮೇಲೆ ದಾಳಿ ಮಾಡ್ತಿದ್ದಾರೆ. ನಮ್ಮ ಸಂಸದರು ಪ್ರಧಾನಮಂತ್ರಿ ಅವರ ಹತ್ತಿರ ನೇರವಾಗಿ ಹೋಗಿ ಒತ್ತಡವನ್ನು ತರಬೇಕು. ನಮ್ಮ ಸಂಸದರು ಅವರ ಕ್ಷೇತ್ರಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Exit mobile version