Site icon PowerTV

ವೃದ್ಧನ ಎಳೆದೊಯ್ದ ಹಸು: ವೃದ್ದ ಸಾವು!

ಪಂಜಾಬ್​: ಹಸುವೊಂದು ವೃದ್ಧನನ್ನ 100 ಮೀಟರ್‌ ದೂರದವರೆಗೆ ಎಳೆದುಕೊಂಡ ಹೋದ ಪರಿಣಾಮ, ಆ ವ್ಯಕ್ತಿ ಮೃತಪಟ್ಟಿರುವ ಘಟನೆ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿದೆ. ಈ ಕುರಿತಾದ ಸಿಸಿಟಿವಿ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ: ಗೃಹಲಕ್ಷ್ಮಿ: ಶೇ 70% ಮಹಿಳೆಯರಿಗೆ ಸಿಕ್ಕಿಲ್ಲ ಲಕ್ಷ್ಮಿ ಭಾಗ್ಯ !

ಮೃತ ವೃದ್ಧನನ್ನು ಸರೂಪ್ ಸಿಂಗ್ ಎಂದು ಗುರುತಿಸಲಾಗಿದೆ. ಈ ದುರದೃಷ್ಟಕರ ಘಟನೆಯಲ್ಲಿ ಪಂಜಾಬ್‌ನ ಮೊಹಾಲಿಯ 83 ವರ್ಷದ ಸರೂಪ್ ಸಿಂಗ್ ಅವರನ್ನು ಸುಮಾರು 100 ಮೀಟರ್‌ಗಳವರೆಗೆ ಬಿಡಾಡಿ ದನವೊಂದು ಎಳೆದುಕೊಂಡು ಹೋದ ಕಾರಣ ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಾಹನಗಳ ದಟ್ಟಣೆ ರಸ್ತೆಯ ಮಧ್ಯೆಯೇ ಬಿಡಾಡಿ ದನ ಆತನನ್ನು ಎಳೆದುಕೊಂಡ ಹೋದ್ದರಿಂದ ಮಾರಣಾಂತಿಕ ಪರಿಸ್ಥಿತಿ ನಿರ್ಮಾಣವಾಯಿತು. ಉದ್ರಿಕ್ತವಾಗಿ ಓಡುತ್ತಿದ್ದ ದನದಿಂದಾಗಿ ಸಿಂಗ್ ಅವರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದರು. ಅಡ್ಡಾದಿಡ್ಡಿಯಾಗಿ ಉದ್ರಿಕ್ತಗೊಂಡ ಬಿಡಾಡಿ ದನವೊಂದು ಸಿಂಗ್ ಅವರ ಮನೆಗೆ ನುಗ್ಗಿತ್ತು. ಅದನ್ನು ನಿಯಂತ್ರಿಸಲು ಹೋದ ಸಿಂಗ್ ಅವರನ್ನು ಎಳೆದುಕೊಂಡ ಹೋದ ಪರಿಣಾಮ ಈ ದುರ್ಘಟನೆ ನಡೆದಿದೆ.

Exit mobile version