Site icon PowerTV

ಸನಾತನಧರ್ಮ ಕುರಿತು ವಿವಾದಾತ್ಮಕ ಹೇಳಿಕೆ: ಉದಯನಿಧಿ ವಿರುದ್ಧ ಕೋರ್ಟ್‌ಗೆ ದೂರು !

ಬಿಹಾರ : ಸನಾತನ ಧರ್ಮ ಕುರಿತು ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ಅವರ ಪುತ್ರ ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಬಿಹಾರದ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: ಸೌಜನ್ಯ ಕೊಲೆ ಕೇಸ್​​​ ಮರುತನಿಖೆಗೆ ಬಿಜೆಪಿ ಆಗ್ರಹ: ಸಿಎಂಗೆ ಮನವಿ

ಮುಜಾಫರ್‌ಪುರ ಮೂಲದ ವಕೀಲ ಸುಧೀರ್‌ ಕುಮಾರ್‌ ಓಜಾ, ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಪಂಕಜ್‌ ಕುಮಾರ್‌ ಲಾಲ್‌ ಅವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಉದಯನಿಧಿ ಅವರ ಈ ಹೇಳಿಕೆಗಳು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಅವರು ಆರೋಪಿಸಿದ್ದಾರೆ.

ರಾಜಕೀಯ ದಿಗ್ಗಜರು ಮತ್ತು ಇತರ ಸೆಲೆಬ್ರಿಟಿಗಳ ವಿರುದ್ಧದ ದೂರುಗಳಿಗಾಗಿ ಸುದ್ದಿಯಲ್ಲಿರುವ ಓಜಾ, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ತಮಿಳುನಾಡು ಸಿಎಂ ಮತ್ತು ಕ್ಯಾಬಿನೆಟ್ ಸಚಿವರೂ ಆಗಿರುವ ಅವರ ಪುತ್ರನನ್ನು ವಿಚಾರಣೆಗೆ ಒಳಪಡಿಸುವಂತೆ ಕೋರಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 14 ಕ್ಕೆ ಮುಂದೂಡಲಾಗಿದೆ.

Exit mobile version