Site icon PowerTV

ಸೌಜನ್ಯ ಕೊಲೆ ಕೇಸ್​​​ ಮರುತನಿಖೆಗೆ ಬಿಜೆಪಿ ಆಗ್ರಹ: ಸಿಎಂಗೆ ಮನವಿ

ಬೆಂಗಳೂರು : ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ಬಿಜೆಪಿ ಆಗ್ರಹಿಸಿದೆ. ಈ ಸಂಬಂಧ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರ ನಿಯೋಗ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಇದನ್ನೂ ಓದಿ: ಬಿಎಂಟಿಸಿ ಬಸ್​ಗಳಲ್ಲಿ ತಡರಾತ್ರಿ ಶೇ50 ರಷ್ಟು ಹೆಚ್ಚುವರಿ ಶುಲ್ಕ ರದ್ದು!: ರಾಮಲಿಂಗಾ ರೆಡ್ಡಿ

ಗೃಹಕಚೇರಿ ಕೃಷ್ಣಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ನೇತೃತ್ವದದ ನಿಯೋಗ ಸಿಎಂರನ್ನ ಭೇಟಿ  ಮಾಡಿ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆಗಬೇಕು ಅಂತ ಮನವಿ ಸಲ್ಲಿಸಿದೆ.

ಬಳಿಕ ಸಿಎಂ ಭೇಟಿ ನಂತರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರನ್ನ ಭೇಟಿ ಮಾಡಿ ಮರು ತನಿಖೆ ನಡೆಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದೆ.

Exit mobile version