Site icon PowerTV

ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ನಟ ರಕ್ಷಿತ್ ಶೆಟ್ಟಿ

ಮೈಸೂರು : ನಟ ರಕ್ಷಿತ್ ಶೆಟ್ಟಿಯವರು ಅಭಿನಯಿಸಿರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿದೆ.

ನಟ ರಕ್ಷಿತ್ ಶೆಟ್ಟಿ ಅವರು ನಟಿಸಿರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವು ಉತ್ತಮ ಪ್ರದರ್ಶನ ಕಂಡಿದ್ದು, ಮೈಸೂರಿನ ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಿದ ನಟ ರಕ್ಷಿತ ಶೆಟ್ಟಿ. ಬಳಿಕ ಕೆಲ ಕಾಲ ಅಭಿಮಾನಿಗಳ ಜೊತೆ ಕೂತು ಸಿನಿಮಾ ವೀಕ್ಷಣೆ ಮಾಡಿದರು.

ಇದನ್ನು ಓದಿ : ಟೀಂ ಭಾರತ್ ಎಂದು ಜೆರ್ಸಿ ಬದಲಿಸಿ : ವೀರೇಂದ್ರ ಸೆಹ್ವಾಗ್

ಅಷ್ಟೇ ಅಲ್ಲದೆ ಅಭಿಮಾನಿಗಳ ಚಿತ್ರ ನೋಡಿದ ಬಳಿಕ ನಟ ರಕ್ಷಿತ್ ಶೆಟ್ಟಿ ಮಾತನಾಡಿದ್ದು, ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಅದಲ್ಲದೆ ನಾವು ಸಿನಿಮಾ ಮಾಡುವುದೇ ಅಭಿಮಾನಿಗಳು ಖುಷಿಯಾಗಿ ನೋಡಲಿ ಎಂದು, ಸಿನಿಮಾದ ಕ್ಲೈಮಾಕ್ಸ್ ಎಲ್ಲ ಅಭಿಮಾನಿಗಳಿಗೂ ಇಷ್ಟ ಆಗ್ತಿದೆ.

ಇದರಿಂದ ಅವರ ಪ್ರೀತಿ ಮತ್ತು ಅಭಿಮಾನವನ್ನು ನೋಡಿ ತುಂಬಾ ಖುಷಿಯಾಗ್ತಿದೆ ಎಂದು ಹೇಳಿ ನಟ ರಕ್ಷಿತ್ ಶೆಟ್ಟಿ ಸಂತೋಷವನ್ನು ವ್ಯಕ್ತಪಡಿಸಿದರು.

Exit mobile version