Site icon PowerTV

ಬಿಎಂಟಿಸಿ ಬಸ್​ಗಳಲ್ಲಿ ತಡರಾತ್ರಿ ಶೇ50 ರಷ್ಟು ಹೆಚ್ಚುವರಿ ಶುಲ್ಕ ರದ್ದು!: ರಾಮಲಿಂಗಾ ರೆಡ್ಡಿ

ಬೆಂಗಳೂರು: ರಾತ್ರಿಪಾಳಿಯಲ್ಲಿ ಬಿಎಂಟಿಸಿ  ಬಸ್‌ಗಳಲ್ಲಿ ಹೆಚ್ಚುವರಿ ಟಿಕೆಟ್‌ ಶುಲ್ಕತೆಗೆದುಕೊಳ್ಳುವ ವ್ಯವಸ್ಥೆಯನ್ನು ರದ್ದು ಮಾಡಿ, ಇಡೀ ದಿನ ಆಯಾ ಬಸ್‌ಗಳ ಸೇವೆಗೆ ತಕ್ಕಂತೆ ಏಕರೂಪ ಟಿಕೆಟ್ ಶುಲ್ಕ ಪಡೆಯ ಸಾರಿಗೆ ಸಚಿವ ರಾಮ ಲಿಂಗಾರೆಡ್ಡಿ ತಿಳಿಸಿದರು.

ಇದನ್ನೂ ಓದಿ: ಮೋದಿಗೆ ಕರ್ನಾಟಕದ ನೆನಪಾಗುವುದು ಚುನಾವಣೆ ವೇಳೆ ಮಾತ್ರ : ಕಾಂಗ್ರೆಸ್

ಕಲಾಸಿಪಾಳ್ಯ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಎಂಟಿಸಿ ರಚನೆಯಾಗಿ 25 ವರ್ಷ ಪೂರೈಸಿದ್ದು, ಅದಕ್ಕಾಗಿ ವಿಶೇಷಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಬಿಎಂಟಿಸಿ ಸೇವೆ ಸೇರಿದಂತೆ ಇನ್ನಿತರ ಮಾಹಿತಿ ನೀಡುವ ಮೊಬೈಲ್  ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ. ಅದರ ಜತೆಗೆ ಬಿಎಂಟಿಸಿಯಲ್ಲಿ ಏಕರೂಪ ಟಿಕೆಟ್ ದರ ನಿಗದಿ ಮಾಡಲಾಗುತ್ತಿದೆ.

ಈವರೆಗೆ ರಾತ್ರಿ ಪಾಳಿಯಲ್ಲಿ ಸಂಚರಿಸುವ ಬಸ್‌ಗಳಲ್ಲಿ ಮಾಮೂಲಿ ದರದ ಶೇ.50ರಷ್ಟು ಹೆಚ್ಚಿನ ಟಿಕೆಟ್ ದರ ವಸೂಲಿ ಮಾಡಲಾಗುತ್ತಿತ್ತು. ಅದನ್ನು ಆಯಾ ಬಸ್ ಸೇವೆಗೆ ನಿಗದಿ ಮಾಡಿರುವ ಟಿಕೆಟ್ ದರವನ್ನು ಪಡೆಯಲಾಗುತ್ತದೆ. ಈ ಕುರಿತಂತೆ ಶೀಘ್ರದಲ್ಲಿ ಆದೇಶಿಸಲಾಗುವುದು ಎಂದರು.

Exit mobile version