Site icon PowerTV

ಪೊಲೀಸ್ ಮನೆಯಲ್ಲೇ ಒಡವೆ, ಹಣ ದೋಚಿದ ಕಳ್ಳರು!

ಚನ್ನಪಟ್ಟಣ: ಪೊಲೀಸ್​​ ಅಧಿಕಾರಿಯೊಬ್ಬರ ಮನೆಯ ಬೀರುವಿನಿಂದ 40 ಗ್ರಾಂ ಚಿನ್ನದ ಒಡವೆ ಹಾಗೂ 30 ಸಾವಿರ ನಗದು ಕಳವು ಮಾಡಿರುವ ಘಟನೆ ತಾಲೂಕಿನ ಕಾಲಿಕೆರೆ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಮಳೆಯಿಂದ ಗೋಡೆ ಕುಸಿದು 100 ಕ್ಕೂ ಅಧಿಕ ಕುರಿಗಳ ಸಾವು

ಗ್ರಾಮದ ರಮೇಶಯ್ಯ ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಬೈಕ್‌ನಿಂದ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರನ್ನು ನೋಡಿ ಕೊಳ್ಳಲು ತಿಂಗಳ ಹಿಂದೆ ಇವರ ಪತ್ನಿ ಜಯಮ್ಮ ಬೆಂಗಳೂ ರಿನಲ್ಲಿ ಉಳಿದುಕೊಂಡಿದ್ದು, ಮಗ ಮಾತ್ರ ಮನೆಯಲ್ಲಿ ವಾಸವಿದ್ದರು.

ಕೆಲ ದಿನಗಳ ನಂತರ ಬೆಂಗಳೂರಿನಿಂದ ಮನೆಗೆ ಮರಳಿ ಬೀರು ತೆಗೆದು ನೋಡಿದಾಗ ಬೀರುವಿನಲ್ಲಿದ್ದ 2 ಲಕ್ಷ ಮೌಲ್ಯದ 2 ಚಿನ್ನದ ಸರ ಹಾಗೂ 30 ಸಾವಿರ ನಗದ ಕಳುವಾಗಿದೆ.ಕುರಿತು ಅಕ್ಕೂರು ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version