Site icon PowerTV

ಬಿಜೆಪಿಯಿಂದ ಇಡೀ ದೇಶ ಮಣಿಪುರದಂತೆ ಬದಲಾಗಲಿದೆ : ಎಂ.ಕೆ ಸ್ಟಾಲಿನ್​

ತಮಿಳುನಾಡು : INDIA ಮೈತ್ರಿಕೂಟ ಗೆಲ್ಲದಿದ್ದರೆ, ಹರಿಯಾಣ ಮತ್ತು ಮಣಿಪುರದಲ್ಲಿ ಭುಗಿಲೆದ್ದಿರುವ ಕೋಮು ಹಿಂಸಾಚಾರದ ದೇಶಾದ್ಯಂತ ವ್ಯಾಪಿಸಲಿದೆ ಎಂದು ಬಿಜೆಪಿ ವಿರುದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸನಾತನಧರ್ಮ ಮಲೇರಿಯಾ, ಡೆಂಘೆ ಇದ್ದಂತೆ: ಉದಯನಿಧಿ ಸ್ಟಾಲಿನ್​​ 

ಪಾಡ್​ಕಾಸ್ಟ್​ ಸಂಚಿಕೆಯಲ್ಲಿ ಮಾತನಾಡಿದ ಅವರು, INDIA ಮೈತ್ರಿಕೂಟ ಗೆಲ್ಲದಿದ್ದರೆ, ಇಡೀ ದೇಶ ಮಣಿಪುರ ಹಾಗೂ ಹರ್ಯಾಣ ರಾಜ್ಯದಂತೆ ಬದಲಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಳೆದ 9 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ತಾನು ಚುನಾವಣೆಗೂ ಮುಂಚೆ ನೀಡಿದ್ದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕುರಿತ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದ್ದಾರೆ.

ಸಾರ್ವಜನಿಕ ಸಂಸ್ಥೆಗಳನ್ನು ಹಾಳುಗೆಡವಿ, ಅವುಗಳನ್ನು ಕಾರ್ಪೊರೇಟ್ ಉದ್ಯಮಿಗಳಿಗೆ ಹಸ್ತಾಂತರಿಸುತ್ತಿರುವ ವಿಷಯವನ್ನು ಮರೆಮಾಚಲು ಬಿಜೆಪಿಯು ಕೋಮುವಾದವನ್ನು ಮುನ್ನೆಲೆಗೆ ತರುತ್ತಿದೆ ಎಂದೂ ದೂರಿದ್ದಾರೆ.

Exit mobile version