Site icon PowerTV

ಮೋದಿಗೆ ಹೊಟ್ಟೆ ಕಿಚ್ಚು ಶುರುವಾಗಿದೆ : ಶರಣಪ್ರಕಾಶ್ ಪಾಟೀಲ್

ಕೊಪ್ಪಳ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೊಟ್ಟೆ ಕಿಚ್ಚು ಶುರುವಾಗಿದೆ. ಬಡವರ ಪರ ಬಿಜೆಪಿ ಸಿದ್ಧಾಂತವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಕುಟುಕಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮ ಗ್ಯಾರಂಟಿ ಯೋಜನೆಗಳು ಅವರನ್ನು ಡಿಸ್ಟರ್ಬ್ ಮಾಡಿವೆ. ಅದಕ್ಕೆ ಸಾಕ್ಷಿ ಬೇಕಾ? ಹೀಗಾಗೇ ಅವರು ನಮಗೆ ಅಕ್ಕಿ ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ದೇಶದ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಿದಾಗ ದಿವಾಳಿ ಆಗಲಿಲ್ಲವೇ? ಈ ದೇಶದ ಬಡವರಿಗೆ ಅನೂಕಲ ಮಾಡಿದ್ರೆ ಹೇಗೆ ಆಶಿಸ್ತು ಆಗುತ್ತೆ? ಕೆಲವೇ ಕೆಲವು ಉದ್ಯಮಿಗಳ 11 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದು ದೂರಿದರು.

ಒಂದು ಪ್ರೆಸ್ ಮೀಟ್ ಮಾಡಿದ್ದಾರಾ?

ನಾವು ಈ ರಾಜ್ಯದ ಜನರ ಕೈಗೆ ದುಡ್ಡು ಕೊಟ್ಟಿದ್ದೇವೆ. ಅದು ಮತ್ತೆ ನಮ್ಮ ಏಕಾನಮಿಗೆ ಬರುತ್ತೆ. ಅವರು ಸಂದರ್ಶನ ನೀಡುವ ಬದಲು ಒಂದು ಸುದ್ದಿಗೋಷ್ಠಿ ಮಾಡಬೇಕಿತ್ತು. ಮೋದಿಯವರು ಇಲ್ಲಿಯವರೆಗೆ ಒಂದೇ ಒಂದು ಪ್ರೆಸ್ ಮೀಟ್ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.

Exit mobile version