Site icon PowerTV

ಮೋದಿಗೆ ಕರ್ನಾಟಕದ ನೆನಪಾಗುವುದು ಚುನಾವಣೆ ವೇಳೆ ಮಾತ್ರ : ಕಾಂಗ್ರೆಸ್

ಬೆಂಗಳೂರು : ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳಿಗೆ ಅನುದಾನ ಸ್ಥಗಿತ ಮಾಡಿರುವ ಕೇಂದ್ರದ ವಿರುದ್ಧ ರಾಜ್ಯ ಕಾಂಗ್ರೆಸ್​ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳಿಗೆ ಬಿಡಿಗಾಸನ್ನೂ ನೀಡದಿರುವ ನರೇಂದ್ರ ಮೋದಿಗೆ ಕರ್ನಾಟಕದ ನೆನಪಾಗುವುದು ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರನಾ? ಎಂದು ಪ್ರಶ್ನಿಸಿದೆ.

ಮೂರು ದಿನಕ್ಕೊಮ್ಮೆ ರೋಡ್ ಶೋ ಮಾಡಿ ಕೈಬೀಸಿದ್ದರಲ್ಲ, ಈಗ ಕನ್ನಡಿಗರ ಹಿತ ಮರೆತು ಹೋಯಿತೇ? ತೆರಿಗೆ ಪಾವತಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ ಕರ್ನಾಟಕಕ್ಕೆ ಮರಳಿ ಕೊಡುತ್ತಿರುವುದು ಶೂನ್ಯ ಎಂದು ವಾಗ್ದಾಳಿ ನಡೆಸಿದೆ.

ಇಷ್ಟೆಲ್ಲ ಅನ್ಯಾಯವಾಗುತ್ತಿದ್ದರೂ ಪ್ರಧಾನಿ ಮೋದಿ ಎದುರು ಮಾತನಾಡಲು ಬಿಜೆಪಿ ಸಂಸದರಿಗೆ ಭಯವೇಕೆ? ಸಂಸದರ ಸ್ಥಾನ ಪಡೆದಿರುವುದು ಮೋದಿ ಎದುರು ಜಿ ಹುಜೂರ್ ಎನ್ನುವುದಕ್ಕೆ ಮಾತ್ರವೇ? ಎಂದು ಬಿಜೆಪಿ ಸಂಸದರಿಗೆ ಚಾಟಿ ಬೀಸಿದೆ.

Exit mobile version