Site icon PowerTV

ದಾವಣಗೆರೆಯಲ್ಲಿ ವಾಲ್ಮೀಕಿ ಸ್ವಾಮೀಜಿ v/s ಸ್ವಾಮೀಜಿ ಫೈಟ್!

ದಾವಣಗೆರೆ: ವಾಲ್ಮೀಕಿ ಸಮುದಾಯದ ಪ್ರಬಲ ಸ್ವಾಮೀಜಿ ರಾಜನಹಳ್ಳಿಯ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಚಿಕ್ಕಬಳ್ಳಾಪುರದ ವಾಲ್ಮೀಕಿ ಕಿರಿಯ ಸ್ವಾಮಿಜೀಗೆ ಧಮ್ಕಿ ಹಾಕಿದ್ದಾರೆ ಎನ್ನಲಾದ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್​ ಆಗುತ್ತಿದೆ.

ಈ ಆಡಿಯೋ ತುಣುಕಿನಲ್ಲಿ ಚಿಕ್ಕಬಳ್ಳಾಪುರದ ವಾಲ್ಮೀಕಿ ಕಿರಿಯ ಸ್ವಾಮೀಜಿ ಬ್ರಹ್ಮಾನಂದ ಸ್ವಾಮೀಜಿಗೆ ಕರೆ ಮಾಡಿ, ತಮ್ಮ ವಿರುದ್ಧ ಕೆಲಸ ಮಾಡಿದ್ರೆ ಬಟ್ಟೆ ಬಿಚ್ಚೀಸ್ತೀನಿ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸನಾತನಧರ್ಮದ ಕುರಿತ ಸ್ಟಾಲಿನ್ ಪುತ್ರನ ಹೇಳಿಕೆಗೆ ಪೇಜಾವರ ಶ್ರೀ ಖಂಡನೆ!

ಅವನ್ಯಾವನೋ ಬೋ.. ಮಗನ ಮಾತನು ಕೇಳಿದ್ರೆ ಅಷ್ಟೇ, ಆತನ ಮಾತು ಕೇಳಿದ್ರೆ ಜನರ ಮಧ್ಯೆಯೇ ಬಟ್ಟೆ ಬಿಚ್ಚಿಸ್ತೀನಿ, ನಾನು ಸುಮ್ಮನಿದ್ರೆ ಸೌಮ್ಯವಾದಿ, ಕೆಣಕಿದ್ರೆ ಉಗ್ರವಾದಿ, ನೀವು ಮದುವೆ ಆಗಿರೋದು ಜನರ ಮುಂದೆ ಹೇಳಬೇಕಾ?, ನೀವು ಸಂಸಾರಸ್ಥರು, ಮನೆಗೆ ಹೋಗಿ ಬರೋ ಬಗ್ಗೆ ನಂಗೆ ಹೇಳ್ತಾರೆ, ಹೇ ಹಂಗೆಲ್ಲಾ ಮಾತಾಡಬೇಡಿ ಅಂತ ಸುಮ್ಮನೆ ಮಾಡ್ಸಿದ್ದೀನಿ ಎಂದು ಇಬ್ಬರ ನಡುವಿನ ಫೋನ್​ ಕಾಲ್​ ಸಂಭಾಷಣೆ ಸದ್ಯ ವೈರಲ್​ ಆಗಿದೆ.

ಇದೇ ವೇಳೆ ಪ್ರಸನ್ನಾನಂದ-ಬ್ರಹ್ಮಾನಂದ ಸ್ವಾಮೀಜಿ ಆಡಿಯೋದಲ್ಲಿ ವಾಲ್ಮೀಕಿ ಸಮುದಾಯದ ಮಾಜಿ ಸಚಿವ ಶ್ರೀರಾಮುಲು ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಈ ಹಿಂದೆಯೂ ಪ್ರಸನ್ನಾನಂದ ಶ್ರೀ ಆಡಿಯೋ ವೈರಲ್ ಆಗಿತ್ತು.

Exit mobile version