Site icon PowerTV

IND vs NEP : ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ

ಬೆಂಗಳೂರು : ನೇಪಾಳ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಶ್ರೀಲಂಕಾದ ಪಲ್ಲೆಕಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್​ನ 5ನೇ ಪಂದ್ಯದಲ್ಲಿ ನೇಪಾಳ ಹಾಗೂ ಭಾರತ ಮುಖಾಮುಖಿಯಾಗಿದೆ.

ಟೀಂ ಇಂಡಿಯಾ ಸೂಪರ್ 4 ಹಂತಕ್ಕೆ ಅವಕಾಶ ಪಡೆಯಬೇಕಾದರೆ ಮುಂಬೈಕರ್ ಪಡೆ ನೇಪಾಳವನ್ನು ಇಂದು ಮಣಿಸಲೇಬೇಕು.

ಬುಮ್ರಾ ಔಟ್, ಶಮಿ ಇನ್

ಇಂದಿನ ಪಂದ್ಯದಲ್ಲಿ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ವೇಗಿ ಜಸ್​ಪ್ರೀತ್ ಬುಮ್ರಾ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಉಳಿದಂತೆ ಪಾಕಿಸ್ತಾನ್ ವಿರುದ್ಧದ ಕಣಕ್ಕಿಳಿದಿದ್ದ ತಂಡವೇ ನೇಪಾಳ ವಿರುದ್ಧ ಕಣಕ್ಕಿಳಿದಿದೆ. ಬುಮ್ರಾ ಬದಲಿಗೆ ಅನುಭವಿ ವೇಗಿ ಮೊಹಮ್ಮದ್ ಶಮಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಭಾರತ ತಂಡ

ರೋಹಿತ್ ಶರ್ಮಾ(ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್(ವಿ.ಕೀ), ಹಾರ್ದಿಕ್ ಪಾಂಡ್ಯ(ಉಪನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್

ನೇಪಾಳ ತಂಡ

ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ರೋಹಿತ್ ಪೌಡೆಲ್ (ನಾಯಕ), ಭೀಮ್ ಶರ್ಕಿ, ಸೋಂಪಾಲ್ ಕಾಮಿ, ಗುಲ್ಸನ್ ಝಾ, ದೀಪೇಂದ್ರ ಸಿಂಗ್ ಐರಿ, ಕುಶಾಲ್ ಮಲ್ಲಾ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಲಲಿತ್ ರಾಜಬನ್ಶಿ

Exit mobile version