Site icon PowerTV

ಸೆಲ್ಫಿ ಹುಚ್ಚಾಟಕ್ಕೆ ಪ್ರಾಣ ಕಳೆದುಕೊಂಡ ಯುವಕ ; ಮತ್ತೊಬ್ಬ ಪಾರು

ಚಾಮರಾಜನಗರ : ಸೆಲ್ಫಿ ಹುಚ್ಚಿನಿಂದ ಇಬ್ಬರು ಯುವಕರು ಕಾಲು ಜಾರಿ ನೀರಿನಲ್ಲಿ ಬಿದ್ದ ಹಿನ್ನೆಲೆ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಕೊಳ್ಳೆಗಾಲ ತಾಲೂಕಿನ ಶಿವನಸಮುದ್ರದ ಜಿರೋ ಪಾಯಿಂಟ್ ಬಳಿ ನಡೆದಿದೆ.

ಬೆಂಗಳೂರು ಮೂಲದ ಪುನೀತ್ (18) ಮೃತ ಯುವಕ. ಮತ್ತು ಲೋಹಿತ್ (19) ಹಾಗೂ ಐವರು ಸ್ನೇಹಿತರು ಶಿವನಸಮುದ್ರಕ್ಕೆ ಬಂದಿದ್ದರು. ಈ ವೇಳೆ ಸೆಲ್ಫಿಗಾಗಿ ಪುನೀತ್ ಹಾಗೂ ಲೋಹಿತ್ ಕಲ್ಲುಗಳ ಮೇಲೆ ಏರಿದಾಗ ಕಾಲು ಜಾರಿ ಸಮುದ್ರದಲ್ಲಿ ಬಿದ್ದಿದ್ದಾರೆ.

ದುರಾದೃಷ್ಟವಶಾತ್ ಪವರ್ ಸ್ಟೇಷನ್ ನಾಲೆಯ ನೀರು ಹಾಗೂ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಹಿನ್ನೆಲೆ ಹೊರ ಹರಿವು ಹೆಚ್ಚಾಗಿದ್ದು, ಪುನೀತ್ ಮೃತಪಟ್ಟಿದ್ದಾನೆ. ಆದರೆ ಅಲ್ಲೇ ಇದ್ದ ತೆಪ್ಪ ನಡೆಸುವವರು ಧಾವಿಸಿದ್ದರಿಂದ ಇನ್ನೊಬ್ಬ ಲೋಹಿತ್​ನನ್ನು ರಕ್ಷಿಸಲಾಯಿತು.

ಇದನ್ನು ಓದಿ : ಅನ್ನಕೊಟ್ಟ ಮನೆಗೆ ಕನ್ನ ಹಾಕಿದ್ದ ಡ್ರೈವರ್; ಆತ್ಮಹತ್ಯೆ ಪ್ರಕರಣ

ಕಳೆದ ತಿಂಗಳು ಒಂದು ಕುಟುಂಬದ ಆರು ಜನರನ್ನು ಕಾಪಾಡಿದ್ದ ತೆಪ್ಪ ಸವಾರರು, ಈ ಭಾರಿ ಇನ್ನೊಬ್ಬ ಯುವಕನ ಪ್ರಾಣವನ್ನು ರಕ್ಷಿಸಿದ್ದಾರೆ. ಈ ಘಟನಾ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Exit mobile version