Site icon PowerTV

ಮೈಸೂರಿಗೆ ಪ್ರತಾಪ್ ಸಿಂಹ ಕೊಡುಗೆ ಏನು? : ಎಂ. ಲಕ್ಷ್ಮಣ

ಮೈಸೂರು : ಸಂಸದರಾಗಿ ಮೈಸೂರಿಗೆ ಪ್ರತಾಪ್ ಸಿಂಹ ಅವರ ಕೊಡುಗೆ ಏನು? ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಪ್ರಶ್ನೆ ಮಾಡಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸಾಧನೆ, ಪ್ರತಾಪ್ ಸಿಂಹ ಸಾಧನೆ ಬಗ್ಗೆ ಬಹಿರಂಗ ಚರ್ಚೆ ನಡೆಯಲಿ ಎಂದರು.

ಸೆಪ್ಟಂಬರ್ 6ಕ್ಕೆ ಸಂಸದರ ಕಚೇರಿ ಬಳಿ ಬಹಿರಂಗ ಚರ್ಚೆ ನಡೆಯಲಿ. ಸಿದ್ದರಾಮಯ್ಯ ಕೆಲಸಗಳ ದಾಖಲೆ ತರುತ್ತೇವೆ. ನಿಮ್ಮ ಸುಳ್ಳು ನಿಮ್ಮ ಡೋಂಗಿತನ ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರು ಕಿಡಿಗೇಡಿಗಳನ್ನು ಗೆಲ್ಲಿಸಬೇಡಿ ಅಂತ ಕೈ ಮುಗಿದಿದ್ದಾರೆ. ಇದರಲ್ಲಿ ಏನು ತಪ್ಪಿದೆ? ಎಂದು ವಾಗ್ದಾಳಿ ನಡೆಸಿದರು.

ಯಾಕೆ ಮೈ ಪರಚಿಕೊಳ್ತೀರಿ

ಕೌನ್ಸಿಲ್ ಸಭೆ ರದ್ದು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೈಯಲ್ಲಿ ಆಗದವರು ಮೈ ಪರಚಿಕೊಂಡರು ಅನ್ನುವಂತಿದೆ. 15 ದಿನದ ಹಿಂದೆಯೇ ನಗರಾಭಿವೃದ್ಧಿ ಸಚಿವರ ಸಭೆ ನಿಗದಿಯಾಗಿತ್ತು. ಅಂದೇ ಏಕೆ ಕೌನ್ಸಿಲ್ ಸಭೆ ಇಟ್ಟುಕೊಂಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಮೈ ಪರಚಿಕೊಂಡು ಯಾಕೆ ಗಾಯ ಮಾಡಿಕೊಳ್ತೀರಿ. ಇನ್ನು ನಾಲ್ಕು ತಿಂಗಳು ಇರಿ ಎಂದು ತಿರುಗೇಟು ನೀಡಿದರು.

ಕೆಲಸಕ್ಕೆ ಬಾರದವರು ಅಂತಾನೇ ಹೇಳೋದು

ಕೆಲಸಕ್ಕೆ ಬಾರದವರನ್ನು ಗೆಲ್ಲಿಸಿದ್ದೀರಾ ಎಂದು ಜಿ.ಟಿ ದೇವೇಗೌಡ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ವಿಚಾರವಾಗಿ ಮಾತನಾಡಿ, ಕೆಲಸ ಮಾಡದವರನ್ನು ಕೆಲಸಕ್ಕೆ ಬಾರದವರು ಅಂತಾನೇ ಹೇಳುವುದು. ಜಿ.ಟಿ ದೇವೇಗೌಡರು ಏನು ಕೆಲಸ ಮಾಡಿದ್ದಾರೆ ಬಂದು ಹೇಳಲಿ ಎಂದು ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡರು.

Exit mobile version