Site icon PowerTV

ಬಿಜೆಪಿ ನನಗೆ ಸೋಲಿಸಲು ಹೋಗಿ ತಾನೇ ಸೋತಿದೆ : ಜಗದೀಶ್ ಶೆಟ್ಟರ್

ರಾಮನಗರ : ಬಿಜೆಪಿ ನನಗೆ ಸೋಲಿಸಲು ಹೋಗಿ ರಾಜ್ಯದಲ್ಲಿ ತಾನೇ ಸೋತಿತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್​ ವಿಧಾನ ಪರಿಷತ್‌ ಸದಸ್ಯ ಜಗದೀಶ್ ಶೆಟ್ಟರ್ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ರಾಮನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಟಿಕೆಟ್‌ ಮಾರಿಕೊಳ್ಳುವ ಪರಿಪಾಠ ಶುರುವಾಗಿದೆ. ಬಿಜೆಪಿಯಲ್ಲಿ ಪರಿಸ್ಥಿತಿ ಮುಂಚಿನಂತಿಲ್ಲ. ಪಕ್ಷ ನಿಷ್ಠೆಗೆ ಬೆಲೆ ಇಲ್ಲ ಎಂದು ಕುಟುಕಿದರು.

ನಾನು 7ನೇ ಬಾರಿ ಗೆದ್ದರೇ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಮಾಡುತ್ತೇನೆ ಎಂದು ಕೆಲವರು ನನಗೆ ಟಿಕೆಟ್‌ ತಪ್ಪಿಸಿದರು. ರಾಮದುರ್ಗದಲ್ಲಿ ಕೂಡ ಹಿರಿಯರಾದ ಮಹದೇವಪ್ಪ ಯಾದವಾಡರಿಗೆ ಟಿಕೆಟ್‌ ತಪ್ಪಿಸಿದರು. ಇದು ಬಿಜೆಪಿಯಲ್ಲಿ ಮುಂಚಿನಂತಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಚಾಟಿ ಬೀಸಿದರು.

ಬಿಜೆಪಿಗರು ಪಶ್ಚಾತಾಪ ಪಡ್ತಿದಾರೆ

ಬಿಜೆಪಿಗೆ ಮುಂಚೆ ಜನ ಬೆಂಬಲ ಇಲ್ಲದಿದ್ದಾಗ ಹಳ್ಳಿ ಹಳ್ಳಿಗಳಿಗೆ ತೆರಳಿ ಸಂಘಟನೆ ಮಾಡಿದ್ದೆ. ಈಗ ಕಾಂಗ್ರೆಸ್‌ ಪಕ್ಷದಲ್ಲಿದ್ದು ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ. ಯಾವ ಪಕ್ಷದಲ್ಲಿದ್ದರೂ ಪ್ರಾಮಾಣಿಕತೆಯಿಂದ ದುಡಿಯುವೆ. ನನಗೆ ಟಿಕೆಟ್‌ ತಪ್ಪಿಸಿ ಬಿಜೆಪಿ ನಾಯಕರು ಪಶ್ಚಾತಾಪ ಪಟ್ಟುಕೊಳ್ಳುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.

Exit mobile version