Site icon PowerTV

ಮುಸ್ಲಿಂರು ಮೊಹಲ್ಲಾದಲ್ಲೇ ಇರಬೇಕು, ನೀವು ಸದಾಶಿವನಗರದಲ್ಲಿ ಇರಬೇಕಾ? : ಪ್ರತಾಪ್ ಸಿಂಹ

ಮೈಸೂರು : ದಲಿತರು ಕೇರಿಯಲ್ಲೇ ಇರಬೇಕು. ಮುಸ್ಲಿಮರು ಮೊಹಲ್ಲಾದಲ್ಲೇ ಇರಬೇಕು. ನೀವು ಮಾತ್ರ ಸದಾಶಿವನಗರದಲ್ಲಿ ಇರಬೇಕಾ? ಎಂದು ಕಾಂಗ್ರೆಸ್​ ವಿರುದ್ಧ ಸಂಸದ ಪ್ರತಾಪ್ ಸಿಂಹ ಗುಡುಗಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಅಭಿವೃದ್ಧಿ ಮಾಡಬಾರದಾ? ಮೈಸೂರು ಅಭಿವೃದ್ಧಿ ಆಗಬಾರದಾ?ಎಂದು ಪ್ರಶ್ನಿಸಿದರು.

ನೀವಂತೂ ಮೈಸೂರು ಅಭಿವೃದ್ಧಿ ಮಾಡಲಿಲ್ಲ. ನಮಗಾದರೂ ಅಭಿವೃದ್ಧಿ ಮಾಡಲು ಬಿಡಿ. ಅಭಿವೃದ್ಧಿ ಗೆ ಕಾಂಗ್ರೆಸ್ ವಿರೋಧವಿದೆ. ಭಾಗ್ಯಗಳ ಕೊಟ್ಟಿದಾರೆ. ಇನ್ನೂ ಓಸಿ ಪ್ಯಾಕ್ ಕೊಡುವುದು ಮಾತ್ರ ಬಾಕಿ ಇದೆ. ಅದನ್ನು ಕೊಟ್ಟು ಜನರನ್ನು ಅಲ್ಲೇ ಕೂರಿಸಿ. ನೀವು ಮಾತ್ರ ಬೆಂಗಳೂರಿನಲ್ಲಿ ಅರಾಮಾಗಿ ಇರಿ ಎಂದು ಕಿಡಿಕಾರಿದರು.

ಮೈಸೂರು ಪಾಲಿಕೆಗೆ ವಿರೋಧವಿದೆ

ಬೃಹತ್ ಮೈಸೂರು ಪಾಲಿಕೆ ಮಾಡಬೇಕು ಎಂಬ ಫೈಲ್ ಪಾಲಿಕೆ ಕೌನ್ಸಿಲ್ ಮುಂದೆ ಇದೆ. ಕೌನ್ಸಿಲ್ ಸಭೆಯನ್ನು ಸರಕಾರ ದಿಢೀರ್ ರದ್ದುಗೊಳಿಸಿದೆ. ಕಾಂಗ್ರೆಸ್ ಬೃಹತ್ ಮೈಸೂರು ಪಾಲಿಕೆಗೆ ವಿರೋಧವಿದೆ. ಸಿದ್ದರಾಮಯ್ಯ ಸಾಹೇಬ್ರೇ, ಐದು ವರ್ಷ ಸಿಎಂ ಆಗಿ ಮೈಸೂರಿಗೆ ಏನು ಕೊಡುಗೆ ಕೊಟ್ರಿ ಅಂತ ಕೇಳಬಾರದಾ? ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

Exit mobile version