Site icon PowerTV

ಮಳೆಯಿಂದ ಗೋಡೆ ಕುಸಿದು 100 ಕ್ಕೂ ಅಧಿಕ ಕುರಿಗಳ ಸಾವು

ಕಲಬುರಗಿ : ಮಳೆಯ ಅವಾಂತರದಿಂದ ಏಕಾಏಕಿ ಗೋಡೆ ಕುಸಿದು 100 ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿರುವ ಘಟನೆ ಕಾಳಗಿ ತಾಲೂಕಿನ ಕೊರವಿ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಮುಂದುವರೆದ ಮಳೆಯಿಂದ ಹಲವು ಹಾನಿಗಳು ಉಂಟಾಗಿವೆ ಅದರ ಬೆನ್ನಲ್ಲೇ ಗ್ರಾಮದ ಮಲ್ಲಪ್ಪ ಪೂಜಾರಿ ಮತ್ತು ಅಣ್ಣಪ್ಪ ಪೂಜಾರಿ ಎಂಬುವವರಿಗೆ ಸೇರಿದ್ದ ಕುರಿಗಳನ್ನು ಕಟ್ಟಿದ್ದ ಜಾಗದಲ್ಲಿ ನಿರಂತರ ಮಳೆಯ ಹಿನ್ನೆಲೆ ತೇವಗೊಂಡಿದ್ದ ಗೋಡೆ ಏಕಾಏಕಿ ಕುಸಿದಿದೆ.

ಇದನ್ನು ಓದಿ : ಕಾವೇರಿ ನೀರು ವಿವಾದ ; ಭುಗಿಲೆದ್ದ ಹೋರಾಟಗಾರರ ಆಕ್ರೋಶ

ಗೋಡೆ ಕುಸಿದ ಪರಿಣಾಮ 100 ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ರಟಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version