Site icon PowerTV

ಮೋದಿ ಹತ್ತಿರ ನಾನೇ ಹೋಗಬೇಕೆಂಬ ಟೈಮ್ ಬರಲಿ : ಹೆಚ್.ಡಿ ದೇವೇಗೌಡ

ಹಾಸನ : ಪ್ರಧಾನ ಮಂತ್ರಿ ನರೇಂದ್ರ ಮೋದಿವರೆಗೂ ನಾನೇ ಹೋಗಬೇಕು ಎಂಬ ಸನ್ನಿವೇಶ ಬಂದಾಗ ಮಾತನಾಡ್ತೀನಿ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಗುಡುಗಿದರು.

ಹಾಸನ ತಾಲ್ಲೂಕಿನ ಬೈಲಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾವೇರಿ ನೀರಿನ ವಿಷಯದಲ್ಲಿ ನಿಮ್ಮ ‌ಮುಂದೆ ಹೇಳುವಷ್ಟು ಶಕ್ತಿ ಇಲ್ಲ ಎಂದು ಹೇಳಿದರು.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಸಿಎಂ ಸಿದ್ದರಾಮಯ್ಯ ನೃತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದಾರೆ. ಸಭೆಯಲ್ಲಿ‌ ನಡೆದ ಮಾತಿನ ಸಾರಾಂಶವನ್ನು ಕುಮಾರಸ್ವಾಮಿ ಹೇಳಿದ್ದಾರೆ. ಒಂದ್ಕಡೆ ಸುಪ್ರೀಂಕೋರ್ಟ್ ನಲ್ಲಿ ತೀರ್ಮಾನವನ್ನು ಕೊಡ್ಲಿಲ್ಲ. ಪ್ರಾಧಿಕಾರ ಇನ್ನೂ‌ ಏನೂ ತೀರ್ಮಾನ ಮಾಡಿಲ್ಲ ಎಂದರು.

ಇದನ್ನೂ ಓದಿ : ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ಮಾತನಾಡುವ ಟೈಮ್ ಬರಬೇಕು

ಮಂಡ್ಯದಲ್ಲಿ ಕಾವೇರಿ ಹೋರಾಟ ನಡೆಯುತ್ತಿದೆ. ನಾನು ಹೇಳಬಾಕಾದ ಜವಾಬ್ದಾರಿ‌ ಇದೆ. ನಾನು ಇನ್ನು ಏನೂ ಮಾತನಾಡಿಲ್ಲ. ನಾನು ಮಾತನಾಡುವ ಟೈಮ್ ಬರಬೇಕು, ಬಂದಾಗ ಮಾತನಾಡ್ತೇನೆ. ಪ್ರಧಾನ ಮಂತ್ರಿವರೆಗೂ ನಾನೇ ಹೋಗಬೇಕು ಎಂಬ ಸನ್ನಿವೇಶ ಬಂದಾಗ ಮಾತನಾಡ್ತೇನೆ. ಈಗ ನಾನು ಏನೂ ಮಾತನಾಡುವುದಿಲ್ಲ ಎಂದು ಹೇಳಿದರು.

Exit mobile version