Site icon PowerTV

ವೈದ್ಯರ ನಿರ್ಲಕ್ಷದಿಂದ ಗೃಹಿಣಿ ಸಾವು

ತುಮಕೂರು : ವೈದ್ಯರ ನಿರ್ಲಕ್ಷ್ಯದಿಂದ ಗೃಹಿಣಿಯೊಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಟವಾಡಿ ಬಳಿಯ ಚಿನ್ಮಯಿ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ನಡೆದಿದೆ.

ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ಮಾನಸ (30) ಹಾಗೂ ಅರುಣ್ ಎಂಬುವವರು ವಿವಾಹವಾಗಿದ್ದರು. ಕೆಲ ದಿನಗಳ ಹಿಂದೆ ಮಾನಸ ಅವರಿಗೆ ಗರ್ಭಕೋಶದಲ್ಲಿ ಮೂರು ಗ್ರಾಮ್ ಗಡ್ಡೆಯಿದೆ ಎಂದು ಹೇಳಿದ್ದ ವೈದ್ಯರು. ಈ ಹಿನ್ನೆಲೆ ವೈದ್ಯರ ಮಾತಿನ ಮೇರೆಗೆ ಮೊನ್ನೆ ಸಂಜೆ ಆಪರೇಷನ್ ಮಾಡಿಸಲೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಾನಸ.

ಇದನ್ನು ಓದಿ : ‘ಸನಾತನ ಧರ್ಮ’ ಜನರ ಹೃದಯವನ್ನು ಆಳುತ್ತಿದೆ : ಅಮಿತ್ ಶಾ

ಬಳಿಕ ತಡರಾತ್ರಿ ಆಪರೇಷನ್ ಮಾಡುವಾಗ ಮಾನಸ ಮೃತಪಟ್ಟಿದ್ದಾರೆ. ಈ ಘಟನಾ ಸಂಬಂಧ ವೈದ್ಯರ ನಿರ್ಲಕ್ಷ್ಯದಿಂದಲೇ ಮಾನಸ ಸಾವನ್ನಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಪತಿ ಹಾಗೂ ಕುಟುಂಬಸ್ಥರು.

ಅಷ್ಟೇ ಅಲ್ಲದೆ ಬೆಂಗಳೂರಿನ ಡಾ. ಶಶಿಕಲಾ ಆಪರೇಷನ್ ನಡೆಸಿದ್ದರು ಎನ್ನಲಾಗಿದ್ದು, ಈ ಘಟನಾ ಹಿನ್ನೆಲೆ ಹೊಸ ಬಡಾವಣೆ ಪೋಲಿಸ್ ಠಾಣೆಗೆ ಚಿನ್ಮಯ್ ನರ್ಸಿಂಗ್ ಹೋಮ್ ವಿರುದ್ಧ ದೂರು ದಾಖಲಿಸಿದ ಕುಟುಂಬಸ್ಥರು.

Exit mobile version