Site icon PowerTV

ಜಿಟಿ ಜಿಟಿ ಮಳೆ ಅವಾಂತರದಿಂದ ರೈತರು ಕಂಗಾಲು

ಯಾದಗಿರಿ : ವರುಣನ ಅಬ್ಬರಕ್ಕೆ ಅಪಾರ ಪ್ರಮಾಣದ ಬೆಳೆ ಮತ್ತು ಮನೆಗಳು ಹಾನಿ ಆಗಿರುವ ಘಟನೆ ಶಹಾಪುರ ತಾಲೂಕಿನ ಬೇವಿನಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಮುಂದುವರೆದ ಮಳೆಯಿಂದ ಹಾನಿಗಳು ಉಂಟಾಗಿವೆ. ನಿನ್ನೆ ರಾತ್ರಿಯಿಂದ ಸುರಿದ ಮಳೆಗೆ ಬೇವಿನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆಗಳಿಗೆ ಹಾನಿ ಆಗಿವೆ. ಅಷ್ಟೇ ಅಲ್ಲದೆ ಬೆಳೆಯ ಜೊತೆಗೆ ದೋರನಹಳ್ಳಿ ಗ್ರಾಮದಲ್ಲಿ ಮಳೆಗೆ ನಾಲ್ಕೈದು ಮನೆಗಳು ಕುಸಿದು ಬಿದ್ದಿವೆ.

ಇದನ್ನು ಓದಿ : ಹುಡ್ಗೀರನ್ನ ನೋಡಲ್ಲ, ಆಂಟಿ ಪ್ರೊಫೈಲ್ ಕಂಡ್ರೆ ಬಿಡಲ್ಲ..!

ಮಳೆಯ ಅಬ್ಬರಕ್ಕೆ ಬೆಳೆ ಹಾಗೂ ಮನೆಗಳನ್ನು ಕಳೆದುಕೊಂಡು ಜನರು ತತ್ತರಿಸಿದ್ದು, ಹಲವು ಅವಾಂತರಗಳಿಗೆ ಸಿಲುಕಿಕೊಂಡಿದ್ದಾರೆ. ಮಳೆ ಆರಂಭವಾದಗ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದ ವರುಣ, ಆದರೆ ಈಗ ದೋರನಹಳ್ಳಿ ಹಾಗೂ ಸುತ್ತ ಮುತ್ತಲಿನ ಗ್ರಾಮದ ಜನರು ಪೇಚಾಡುವಂತೆ ಮಾಡಿದೆ.

Exit mobile version