Site icon PowerTV

ಕುಮಾರಸ್ವಾಮಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಕಳೆದ ನಾಲ್ಕು ದಿನಗಳ ಚಿಕಿತ್ಸೆ ಬಳಿಕ ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸುಸ್ತು, ಎದೆನೋವಿನಿಂದ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ ಅವರು, ಭಗವಂತನ ದಯೆಯಿಂದ ನಾನು ಆರೋಗ್ಯವಾಗಿದ್ದೇನೆ. ನನಗರ ಪುನರ್ ಜನ್ಮ ಬಂದಿದೆ. ನೀವು ಕೂಡ ನಿದ್ದೆ ಬಿಟ್ಟು ನನ್ನ ಜೊತೆಗೆ ಇದ್ರಿ. ಭಗವಂತ, ತಂದೆ-ತಾಯಿ ಆಶೀರ್ವಾದದಿಂದ ಗುಣಮುಖನಾಗಿದ್ದೇನೆ ಎಂದು ಹೇಳಿದರು.

ತೋಟದ ಮನೆಯಲ್ಲಿ ‌ರಾತ್ರಿ 2 ಗಂಟೆಗೆ ಎಚ್ಚರವಾಯ್ತು. ಭಗವಂತನ ಪ್ರಾರ್ಥನೆ ‌ಮಾಡಿದೆ. ನನ್ನ ಧ್ವನಿಯಲ್ಲಿ ವ್ಯತ್ಯಾಸವಾಗಿದ್ದು ಗೊತ್ತಾಯ್ತು. ಮೊದಲು ಫ್ಯಾಮಿಲಿ ಡಾಕ್ಟರ್ ಮಂಜುನಾಥ್ ಅವರಿಗೆ ಮಾತಾಡಿ, ಬಳಿಕ ಅಪೋಲೋ ಆಸ್ಪತ್ರೆಯ ವೈದ್ಯರಿಗೆ ಮಾತಾಡಿದೆ. ಕೇವಲ‌ 20 ನಿಮಿಷದಲ್ಲಿ ಆಸ್ಪತ್ರೆಗೆ ಬಂದೆವು ಎಂದು ತಿಳಿಸಿದರು.

ಭಗವಂತ‌ 3ನೇ ‌ಜನ್ಮ ಕೊಟ್ಟಿದ್ದಾನೆ

ಸ್ಟ್ರೋಕ್ ಬಂದಾಗ ಯಾವ ರೀತಿ ಸ್ಪಂದಿಸಬೇಕು. ವೇಗವಾಗಿ ಆಸ್ಪತ್ರೆಗೆ ಬರಬೇಕು. ಬಡವ ಆಗಲಿ, ಶ್ರೀಮಂತ ಆಗಲಿ, ಆದಷ್ಟು‌ ಬೇಗ ಆಸ್ಪತ್ರೆಗೆ ಬರಬೇಕು. ಗೋಲ್ಡನ್ ಅವರ್ ನಾವು ಕಳೆದುಕೊಳ್ಳಬಾರದು. ಹೀಗಾದ್ರೆ, ಜೀವನವನ್ನು‌ ಮತ್ತೊಬ್ಬರ‌ ಮೇಲೆ ಅವಲಂಬಿಸಬೇಕಾಗುತ್ತದೆ. ನನಗೆ ಮೂರನೇ ‌ಜನ್ಮವನ್ನು ಭಗವಂತ‌ ಕೊಟ್ಟಿದ್ದಾನೆ ಎಂದರು.

Exit mobile version