Site icon PowerTV

ಚಂಪಾರಣ್‌ ಮಟನ್ ತಯಾರಿಸಿದ ರಾಹುಲ್ ಗಾಂಧಿ​!

ಮುಂಬೈ : ರಾಜಕೀಯ ಜೀವನದಲ್ಲಿ ಸದಾ ಬ್ಯುಸಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಆರ್‌ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಮಾರ್ಗದರ್ಶನದಲ್ಲಿ ಚಂಪಾರಣ್ ಮಟನ್ ಅಡುಗೆ ಮಾಡಿ ಉಣಬಡಿಸಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಹಣವನ್ನು ತಿರಸ್ಕರಿಸಿದ ಸ್ವಾಭಿಮಾನಿ ಅಜ್ಜಿ!

ಎರಡು ದಿನಗಳ ಹಿಂದೆ ಮುಂಬೈನಲ್ಲಿ ನಡೆದ ಇಂಡಿಯಾ ಮೈತ್ರಿಕೂಟ ಸಭೆ ನಡೆದ ಒಂದು ದಿನದ ಬಳಿಕ ಲಾಲು ಪ್ರಸಾದ್ ಯಾದವ್‌ ಅವರು ತಂಗಿದ್ದ ಪುತ್ರಿ ಮಿಸಾ ಭಾರತಿ ನಿವಾಸಕ್ಕೆ ರಾಹುಲ್‌ ಗಾಂಧಿ ಭೇಟಿ ನೀಡಿದ್ದರು. ಈ ವೇಳೆ ರಾಜಕೀಯ ಚರ್ಚೆಯ ಜೊತೆಗೆ ಲಾಲು ಪ್ರಸಾದ್‌ ಮಾರ್ಗದರ್ಶನದಲ್ಲಿ ‘ಚಂಪಾರಣ್‌ ಮಟನ್ ತಯಾರಿಸಿ ಉಣಬಡಿಸಿದ್ದಾರೆ. ಈ ಸಂದರ್ಭದಲ್ಲಿ ಲಾಲು ಪ್ರಸಾದ್‌ ಪುತ್ರ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹಾಗೂ ಪುತ್ರಿ ಮಿಸಾ ಭಾರತಿ ಇದ್ದರು.

ಅಡುಗೆ ವಿಚಾರದಲ್ಲಿ ನಾನು ಪರಿಣಿತನಲ್ಲ ಆದರೆ ಯುರೋಪ್‌ನಲ್ಲಿ ಒಬ್ಬನೇ ಇರುವಾಗ ಅಡುಗೆ ಮಾಡುವುದನ್ನು ಕಲಿತುಕೊಂಡಿದ್ದೇನೆ. ಆದರೆ ನೀವು ಮಾತ್ರ ಪಾಕಶಾಸ್ತ್ರದಲ್ಲಿ ಪರಿಣಿತರು ಎಂದು ರಾಹುಲ್ ಹೇಳುತ್ತಾರೆ. ಲಾಲು ಪ್ರಸಾದ್‌ ಅವರು ಚಂಪಾರಣ್ ಮಟನ್‌ ತಯಾರಿಕೆಯನ್ನು ರಾಹುಲ್‌ ಗಾಂಧಿ ಅವರಿಗೆ ಹಂತ ಹಂತವಾಗಿ ವಿವರಿಸುತ್ತಾ ಹೋಗುತ್ತಾರೆ. ನಂತರ ನಡೆದ ಡಿನ್ನರ್ ಪಾರ್ಟಿಯಲ್ಲಿ ಎಲ್ಲರೂ ಬಾಡೂಟ ಸವಿಯುತ್ತಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊವನ್ನು ರಾಹುಲ್‌ ಗಾಂಧಿ ಹಂಚಿಕೊಂಡಿದ್ದಾರೆ.

Exit mobile version