Site icon PowerTV

ಕಾವೇರಿ ನೀರು ವಿವಾದ ; ಭುಗಿಲೆದ್ದ ಹೋರಾಟಗಾರರ ಆಕ್ರೋಶ

ಆನೇಕಲ್ : ಕಾವೇರಿ ನೀರು ವಿಚಾರವಾಗಿ ಪಂಜಿನ ಮೆರವಣಿಗೆ ಮೂಲಕ ಆಕ್ರೋಶ ಹೊರಹಾಕುತ್ತಿರುವ ಹೋರಾಟಗಾರರ ಘಟನೆ ತಾಲೂಕಿನ ಚಂದಾಪುರದಲ್ಲಿ ನಡೆದಿದೆ.

ತಮಿಳುನಾಡಿಗೆ ಕಾವೇರಿ ನೀರು ಹೊರಬಿಟ್ಟ ಹಿನ್ನೆಲೆ ರಾಜ್ಯದಲ್ಲಿ ಇನ್ನೂ ರೈತರ ಹಾಗೂ ಹೋರಾಟಗಾರರ ಪ್ರತಿಭಟನೆಗಳು ನಡೆಯುತ್ತಲೆ ಇವೆ. ಅದರ ಬೆನ್ನಲ್ಲೇ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದದಿಂದ, ರಾಜ್ಯ ಸರ್ಕಾರದ ನೀತಿಯನ್ನ ಖಂಡಿಸಿ ಕನ್ನಡ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿ : ಜಿಟಿ ಜಿಟಿ ಮಳೆ ಅವಾಂತರದಿಂದ ರೈತರು ಕಂಗಾಲು

ಅಷ್ಟೇ ಅಲ್ಲದೆ ಈ ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಕೃಷ್ಣೇಗೌಡ ಅವರು ನೇತೃತ್ವವನ್ನು ವಹಿಸಿದ್ದರು. ಬಳಿಕ ಸೂರ್ಯನಗರದಿಂದ ಚಂದಾಪುರದವರೆಗೂ ಪಂಜಿನ ಮೆರವಣಿಗೆ ಮೂಲಕ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಆಕ್ರೋಶ ಹೊರಹಾಕಿದ ಹೋರಾಟಗಾರರು.

Exit mobile version