Site icon PowerTV

ಮತ್ತೆ ಬಂತು ಬಿಗ್​ಬಾಸ್ ಸೀಸನ್​: ಈ ಬಾರಿ ‘ಸಮ್​ಥಿಂಗ್ ಸ್ಪೆಷಲ್’

ಬೆಂಗಳೂರು : ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್​ಬಾಸ್ ಮತ್ತೆ ಬಂದಿದೆ. ಸುದೀಪ್ ಹುಟ್ಟುಹಬ್ಬದ ದಿನವೇ ಹೊಸ ಸೀಸನ್​ನ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಆದರೆ ಪ್ರೋಮೋನಲ್ಲಿ ಸುದೀಪ್ ಇಲ್ಲ ಬದಲಿಗೆ ‘ಬಿಗ್​ಬಾಸ್’ ಮಾತ್ರವೇ ಇದ್ದಾರೆ.

ಈ ಹಿಂದಿನ ಬಿಗ್​ಬಾಸ್​ಗಳಿಗಿಂತಲೂ ಈ ಬಾರಿಯ ಬಿಗ್​ಬಾಸ್ ಭಿನ್ನವಾಗಿರಲಿದೆ ಎಂದು ಪ್ರೋಮೋನಲ್ಲಿ ಹೇಳಲಾಗಿದೆ. ಈವರೆಗೆ ಒಂಬತ್ತು ಯಶಸ್ವಿ ಸೀಸನ್ ಅನ್ನು ಬಿಗ್​ಬಾಸ್ ಮುಗಿಸಿದ್ದು, ಹತ್ತನೇ ಸೀಸನ್ ಶೀಘ್ರವೇ ಪ್ರಾರಂಭವಾಗಲಿದೆ. ಮನೆಯಲ್ಲಿ ಕ್ಯಾಮೆರಾಗಳನ್ನಿಟ್ಟು ಅವರ ಚಲನ ವಲನ, ಮಾತುಗಳನ್ನು ಪ್ರೇಕ್ಷಕರಿಗೆ ಬಿಗ್​ಬಾಸ್ ರಿಯಾಲಿಟಿ ಶೋನಲ್ಲಿ ತೋರಿಸಲಾಗುತ್ತದೆ.

ಇದನ್ನು ಓದಿ: 1 ಪಾನಿಪೂರಿಗಾಗಿ ನಡು ರಸ್ತೆಯಲ್ಲಿ ಹೊಡೆದಾಟ: ವೀಡಿಯೋ ವೈರಲ್

ಇದೀಗ ಬಿಡುಗಡೆ ಆಗಿರುವ ಪ್ರೋಮೋ ತುಸು ಭಿನ್ನವಾಗಿದ್ದು, ಈ ಬಾರಿ ರಿಯಾಲಿಟಿ ಶೋನ ಫಾರ್ಮ್ಯಾಟ್ ಸಹ ಭಿನ್ನವಾಗಿರುವ ಸುಳಿವು ನೀಡುತ್ತಿದೆ. ಮನೆಯೊಳಗಿನ ಕ್ಯಾಮೆರಾದ ಬದಲಿಗೆ ಪ್ರೋಮೋನಲ್ಲಿ ರಸ್ತೆಯಲ್ಲಿನ ಕ್ಯಾಮೆರಾಗಳನ್ನು ತೋರಿಸಲಾಗಿದೆ. ರಸ್ತೆಯಲ್ಲಿ, ಕಟ್ಟಡಗಳಿಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ತೋರಿಸಿ, ರಸ್ತೆಯಲ್ಲಿ ಓಡಾಡುವ ವ್ಯಕ್ತಿಗಳ ದೃಶ್ಯಗಳನ್ನು ಸೆರೆ ಹಿಡಿದು ಪ್ರೋಮೋನಲ್ಲಿ ತೋರಿಸಲಾಗಿದೆ. ಪ್ರೋಮೋದ ಅಂತ್ಯದಲ್ಲಿ ಈ ಬಾರಿ ಬಿಗ್​ಬಾಸ್ ‘ಸಮ್​ಥಿಂಗ್ ಸ್ಪೆಷಲ್’ ಆಗಿರಲಿದೆ ಎಂದು ಹೇಳಿರುವುದು ಕುತೂಹಲವನ್ನು ದ್ವಿಗುಣಗೊಳಿಸಿದೆ.

Exit mobile version