Site icon PowerTV

ಆಪರೇಷನ್ ಆಗೋಕೆ ನನಗೆ ಕ್ಯಾನ್ಸರ್ ಆಗಿಲ್ಲ.. ಗಡ್ಡೆನೂ ಆಗಿಲ್ಲ : ರಾಜೂಗೌಡ

ಬೆಂಗಳೂರು : ಆಪರೇಷನ್ ಆಗೋಕೆ ನನಗೆ ಕ್ಯಾನ್ಸರ್ ಆಗಿಲ್ಲ, ಗಡ್ಡೆನೂ ಆಗಿಲ್ಲ. ಸಮಸ್ಯೆಯೂ ಆಗಿಲ್ಲ, ಡಾಕ್ಟರ್ ಅವಶ್ಯಕತೆ ಕೂಡ ಇಲ್ಲ ಎಂದು ಮಾಜಿ ಶಾಸಕ ರಾಜೂಗೌಡ ಹೇಳಿದರು.

ಡಿಸಿಎಂ ಡಿಕೆಶಿ ಜೊತೆ ಸುದೀಪ್ ಬರ್ತ್​ ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ತಮ್ಮದು ತಪ್ಪಲ್ಲ, ಆಪರೇಷನ್ ಹಸ್ತ ಅನ್ನೋ ವಿಚಾರವೇ ಹೆಚ್ಚಿದೆ ಎಂದರು.

ನಿನ್ನೆ ಸುದೀಪ್ ಅಣ್ಣ ಹುಟ್ಟುಹಬ್ಬ ಇತ್ತು. ಜೆ.ಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್‌ನಲ್ಲಿ ಪಾರ್ಟಿ ಇತ್ತು. ಮಾಜಿ ಸಚಿವ ಬಿ.ಸಿ ಪಾಟೀಲ್ ಕೂಡ ಸಿಕ್ಕಿದ್ರು. ಡಿಕೆಶಿ ಅಣ್ಣ ಅವರೂ ಬಂದಿದ್ರು. ಅಲ್ಲಿ ಫಿಲ್ಮ್ ಪ್ರೊಡ್ಯೂಸರ್, ನಟರು ಎಲ್ಲರೂ ಇದ್ರು. ಡಿಕೆಶಿ ಅವರು ರಿಸಲ್ಟ್ ಬಗ್ಗೆ ಕೇಳಿದ್ರು. ನಾವು ಮೊದಲಿಂದಲೂ ಆತ್ಮೀಯರು. ನಾವೇ ಅವರ ಜೊತೆ ಪಾರ್ಟಿಯಲ್ಲಿ ಇದ್ದೆವು. ಪಾರ್ಟಿಯಿಂದ ಅವರು ಬೇಗನೆ ಹೊರಟ್ರು. ಸುದೀಪ್ ಅವರ ಹುಟ್ಟುಹಬ್ಬಕ್ಕಿಂತ ಬೆಳಗ್ಗೆ ಎದ್ದ ಮೇಲೆ ನಮ್ಮದೇ ಹೆಚ್ಚು ಸುದ್ದಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ : ರೇಣುಕಣ್ಣರನ್ನ ಯಾರೂ ಖರೀದಿ ಮಾಡಕ್ಕಾಗಲ್ಲ : ರಾಜೂಗೌಡ

ಗೆದ್ದವರು ಮಜಾ ಪಡೀತಿದ್ದಾರೆ

ಕಾಂಗ್ರೆಸ್ ನಿಂದ ಹಲವರಿಗೆ ಆಹ್ವಾನ ವಿಚಾರ ಕುರಿತು ಮಾತನಾಡಿ, ನಾನು ಪಕ್ಷ ಬಿಡುವ ಪ್ರಶ್ನೆ ಇಲ್ಲ. ಪಕ್ಷದಲ್ಲಿ ಉತ್ತಮ ಸ್ಥಾನಮಾ‌ನ ನೀಡಿದ್ದಾರೆ. ಚುನಾವಣೆ ಅಂದ್ಮೇಲೆ ಸೋಲು, ಗೆಲುವು ಇದ್ದಿದ್ದೆ. ನನಗೆ ಆಹ್ವಾನ ಬಂದಿಲ್ಲ. ಡಿಕೆಶಿ, ರಾಜು ಚೆನ್ನಾಗಿ ಕೆಲಸ ಮಾಡಿದ್ದೆ ಹೇಗೆ ಸೋತೆ ಅಂದ್ರು. ನಿಮ್ಮ ಪ್ರಭಾವ, ಸಿದ್ದರಾಮಯ್ಯ ಅವರ ಪ್ರಭಾವ ಅಂತ ಹೇಳಿದೆ. ಈಗ ಬರುವ ಪ್ರಶ್ನೆ ಇಲ್ಲ. ಗೆದ್ದವರು ಗೆಲುವಿನ ಮಜಾ ಪಡೀತಿದ್ದಾರೆ. ನಾವು ಸೋತ ಮಜಾ ಪಡೀತಿದ್ದೇವೆ. ಗೆಲುವಿನ ಮಜವೇ ಯಾವಾಗಲೂ ಇರಬಾರದು ಎಂದು ತಿಳಿಸಿದರು.

ಸಂತೋಷ್ ಜಿ ಸುಮ್ಮನೆ ಹೇಳಿಲ್ಲ

ಇವತ್ತು ಬಾಂಬೆ ಟೀಮ್ ಅನ್ನೋದು ತಪ್ಪು. ಅವರು ಬಾರದಿದ್ರೆ ಅಧಿಕಾರ ಹಿಡಿಯಲು ಆಗ್ತಿರಲಿಲ್ಲ. ಸಂತೋಷ್ ಜಿ ಸುಮ್ಮನೆ ಹೇಳಿಲ್ಲ. ಅವರ ಜೊತೆ ಸಂಪರ್ಕದಲ್ಲಿ ಇರದೆ ಅವರು ಹೇಳಲ್ಲ. ರಾಯರೆಡ್ಡಿ ಅವರ ಲೆಟರ್ ಬಂದ ಮೇಲೆ ಚರ್ಚೆ ಶುರುವಾಯ್ತು. ನಮ್ಮದು ರಾಜಕೀಯ ಹೊರತಾಗಿಯೂ ಸಂಬಂಧ ಇದೆ. ಹಾಗಾಗಿ ಭೇಟಿಯಾಗಿದ್ದೆವು ಎಂದು ಹೇಳಿದರು.

Exit mobile version