Site icon PowerTV

Asia Cup 2023: ಇಂದು ಬಾಂಗ್ಲಾ-ಅಫ್ಘನ್ ಮುಖಾಮುಖಿ

ಕ್ಯಾಂಡಿ (ಶ್ರೀಲಂಕ) : ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಬಾಂಗ್ಲಾದೇಶ ತಂಡ ಏಷ್ಯಾಕಪ್ ಏಕದಿನ ಟೂರ್ನಿಯ ತನ್ನ ಎರಡನೇ ಲೀಗ್ ಪಂದ್ಯದಲ್ಲಿ ಭಾನುವಾರ ಅಪ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.

ಸೂಪರ್-4 ಹಂತಕ್ಕೇರಲು ಶಕೀಬ್ ಅಲ್ ಹಸನ್ ಪಡೆಗೆ ಗೆಲುವು ಅನಿವಾರ್ಯ ಎನಿಸಿದೆ. ಲಂಕಾ ಎದುರು ಮೊದಲ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್ ನಿರ್ವಹಣೆ ತೋರುವಲ್ಲಿ ವಿಫಲವಾಗಿದ್ದ ಬಾಂಗ್ಲಾ ಪುಟಿದೇಳುವ ವಿಶ್ವಾಸದಲ್ಲಿದೆ. ಅಫ್ಘಾನಿಸ್ತಾನ ಟೂರ್ನಿಯಲ್ಲಿ ಮೊದಲ ಪಂದ್ಯ ಆಡಲಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ: ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ಅಧ್ಯಕ್ಷರಾಗಿ ಮಾಧವನ್​ ಆಯ್ಕೆ

ಬಾಂಗ್ಲಾ ತಂಡ ತಮ್ಮ ನಾಯಕ ಶಕೀಬ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಬೌಲಿಂಗ್‌ನಲ್ಲಿ ಮುಸ್ತಾಫಿಜುರ್, ಟಸ್ಕಿನ್ ಅಹ್ಮದ್ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಜುಲೈನಲ್ಲಿ ಅಫ್ಘಾನಿಸ್ತಾನ ಎದುರಿನ ಸರಣಿ ಸೋಲು ಹಿನ್ನಡೆ ಎನಿಸಿದೆ. ಅಫ್ಘನ್ ತಂಡ ಪಾಕ್ ವಿರುದ್ಧ ಏಕದಿನ ಸರಣಿ ಸೋಲಿನೊಂದಿಗೆ ಟೂರ್ನಿಗೆ ಆಗಮಿಸಿದ್ದು, ಹಶ್ಮತ್ ಉಲ್ಲಾ ನೂತನ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಆರಂಭಿಕ ರಹಮಾನುಲ್ಲಾ ಗುರ್ಬಜ್ ಉತ್ತಮ ಫಾರ್ಮ್‌ನಲ್ಲಿದ್ದು, ನಾಯಕತ್ವ ಕಳೆದುಕೊಂಡಿರುವ ಸ್ಪಿನ್ನರ್ ರಶೀದ್ ಖಾನ್ ಸಾಮರ್ಥ್ಯ ಪ್ರದರ್ಶಿಸಬೇಕಿದೆ. ಅನುಭವಿ ಮೊಹಮದ್ ನಬಿ, ಇಬ್ರಾಹಿಂ ಜದ್ರಾನ್ ಪ್ರಮುಖ ಬ್ಯಾಟರ್‌ಗಳಾಗಿದ್ದಾರೆ.

Exit mobile version