Site icon PowerTV

ಪಾಕ್​ ವಿರುದ್ದ ಟೀಮ್​ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳಿಂದ ವಿಶೇಷ ಪೂಜೆ

ಹುಬ್ಬಳ್ಳಿ : ಇಂದು ಭಾರತ ವರ್ಸಸ್ ಪಾಕಿಸ್ತಾನ್ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯ ನಡೆಯಲಿದ್ದು ಭಾರತದ ಗೆಲುವಿಗಾಗಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

2023 ರ ಏಷಿಯಾ ಕಪ್ ಕ್ರಿಕೇಟ್​ ಪಂದ್ಯಾವಳಿಯಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಗೆಲುವು ಸಾಧಿಸಲು ಭಾರತದ ಪರವಾಗಿ ಹುಬ್ಬಳ್ಳಿ ಗಣೇಶಪೇಟೆಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಕ್ರಿಕೇಟ್​ ಅಭಿಮಾನಿ ಮತ್ತು ಕನ್ನಡಪರ ಸಂಘಟನೆಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.​

ಇದನ್ನೂ ಓದಿ: ಸಿಂಗಾಪುರ ಅಧ್ಯಕ್ಷರಾಗಿ ಭಾರತೀಯ ಮೂಲದ ವ್ಯಕ್ತಿ ಆಯ್ಕೆ

ಕನ್ನಡಪರ ಸಂಘಟನೆಗಳು ಮತ್ತು ಕ್ರಿಕೇಟ್ ಅಭಿಮಾನಿಗಳು ಭಾರತ ಕ್ರಿಕೆಟ್ ತಂಡದ ಸದಸ್ಯರ ಭಾವಚಿತ್ರ ಹಿಡಿದು ದೇವರಿಗೆ ಪೂಜೆ ಸಲ್ಲಿಸಿರದರು. ಇದೇ ವೇಳೆ ಇಸ್ರೋದ ಮಿಷನ್ ಆದಿತ್ಯ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.

Exit mobile version